Asianet Suvarna News Asianet Suvarna News

'ಭಾರತಾಂಬೆಗಾಗಿ ರಾಹುಲ್ ಬಲಿದಾನ ಆದ್ರೂ ತೊಂದರೆ ಇಲ್ಲ'

ಬಾಲಕೋಟ್ ನಲ್ಲಿ ಒಬ್ಬರೂ ಸತ್ತಿಲ್ಲ ಎನ್ನುವುದಕ್ಕೆ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

BJP Leader Ayanur Manjunath lashes out at Rahul Gandhi
Author
Bengaluru, First Published Apr 16, 2019, 3:56 PM IST

ದಾವಣಗೆರೆ, (ಏ.16): ಯೋಧರ ಜೊತೆ ಸರ್ಜಿಕಲ್ ಸ್ಟ್ರೈಕ್ ಗೆ ರಾಹುಲ್ ಗಾಂಧಿ ಹೋಗಲಿ. ಯೋಧರ ಜೊತೆ ಭಾರತಾಂಬೆಗಾಗಿ ರಾಹುಲ್ ಬಲಿದಾನ ಆದರೂ ತೊಂದರೆ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾತನಾಡಿದ ಆಯನೂರು, ಯೋಧರ ಸಾವಿನ ವಿಚಾರದಲ್ಲಿ ಚೆಲ್ಲಾಟ ಆಡುವುದು ಸರಿಯಲ್ಲ. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷ್ಯ ಕೇಳುವ ರಾಹುಲ್ ನನ್ನು  ಸೈನ್ಯದ ಜೊತೆ ಕಳಿಸಿ ಬಲಿದಾನವಾಗಬೇಕೆಂದ ಎಂದರು.

ಬಡವರಿಗೆ ತಿಂಗಳಿಗೆ 6 ಸಾವಿರ: ಬಡತನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಎಂದ ರಾಹುಲ್!

ಯೋಧರ ಜೊತೆ ಸರ್ಜಿಕಲ್ ಸ್ಟ್ರೈಕ್ ಗೆ ರಾಹುಲ್ ಗಾಂಧಿ ಸೇನೆ ಹೆಲಿಕ್ಯಾಪ್ಟರ್ ನಲ್ಲಿ ಹೋಗಿ ಬಂದರೆ ಗೊತ್ತಾಗುತ್ತೆ. ಭಾರತಾಂಬೆಗಾಗಿ ರಾಹುಲ್ ಬಲಿದಾನ ಆದರೂ ತೊಂದರೆ ಇಲ್ಲ ಎಂದು ಹೇಳಿದರು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

Follow Us:
Download App:
  • android
  • ios