ಲೋಕಸಭೆಗೆ ಇಂದು 6ನೇ ಹಂತದ ಮತದಾನ| ಪ.ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ| ಬಿಜೆಪಿ ಅಭ್ಯರ್ಥಿ ಭಾರತೀ ಘೋಷ್ ಮೇಲೆ ಹಲ್ಲೆ ಯತ್ನ| ಬೂತ್‌ನಿಂದ ಹೊರದಬ್ಬಿ ಅಟ್ಟಾಡಿಸಿಕೊಂಡು ಹೋದ ಟಿಎಂಸಿ ಮಹಿಳಾ ಕಾರ್ಯಕರ್ತರು| ದೇವಸ್ಥಾನದಲ್ಲಿ ಶರುಣು ಪಡೆದ ಮಾಜಿ ಐಪಿಎಸ್ ಅಧಿಕಾರಿ| ಮಾಧ್ಯಮದ ಮುಂದೆ ಕಣ್ಣೀರಾದ ಭಾರತಿ ಘೋಷ್

ಘಟಾಲ್(ಮೇ.12): ಲೋಕಸಭಾ ಚುನಾವಣೆಗೆ ದೇಶಾದ್ಯಂತ 6 ನೇ ಹಂತದ ಮತದಾನ ನಡೆಯುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಘಟಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಐಪಿಎಸ್ ಅಧಿಕಾರಿ ಭಾರತಿ ಘೋಷ್ ಮೇಲೆ ಟಿಎಂಸಿ ಮಹಿಳಾ ಕಾರ್ಯಕರ್ತರು ಹಲ್ಲೆ ನಡೆಸಲು ಯತ್ನಿಸಿದ್ದಾರೆ.

Scroll to load tweet…

ಮತ ಚಲಾಯಿಸಲು ಮತಗಟ್ಟೆಗೆ ಬಂದಿದ್ದ ಭಾರತಿ ಘೋಷ್ ಮೇಲೆ ಟಿಎಂಸಿ ಮಹಿಳಾ ಕಾರ್ಯಕರ್ತರು ಹಲ್ಲೆ ನಡೆಸಲು ಮುಂದಾಗಿದ್ದಾರೆ. 

ಅಲ್ಲದೇ ಭಾರತಿ ಅವರನ್ನು ಮತಗಟ್ಟೆಯಿಂದ ಹೊರದಬ್ಬಿದ ದುರುಳರು, ಅವರನ್ನು ಅಟ್ಟಾಡಿಸಿಕೊಂಡು ಹೋದಾಗ ಭಾರತಿ ಸಮೀಪದ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದಾರೆ.

Scroll to load tweet…

ಈ ಕುರಿತು ಮಾಧ್ಯಮದ ಮುಂದೆ ಮಾತನಾಡುವಾಗ ಕಣ್ಣೀರಾದ ಭಾರತಿ ಘೋಷ್, ಕ್ಷೇತ್ರದ ಅಭ್ಯರ್ಥಿಯಾದ ತಮ್ಮ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ಈ ಕುರಿತು ವರದಿ ಕೇಳಿರುವ ಚುನಾವಣಾ ಆಯೋಗ, ತನಿಖೆ ನಡೆಸುವುದಾಗಿ ಭರವಸೆ ನೀಡಿದೆ.

ಲೋಕಸಭೆಗೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ