ಹಾಸನ[ಮಾ. 30]  27 ವರ್ಷದ ಹುಡುಗ  ಒಂಬತ್ತೂವರೆ ಕೋಟಿ ಒಡೆಯ, ಹಾಲು ಕರೆದು ಅಷ್ಟು ಸಂಪಾದನೆ ಮಾಡಿರೋದಂತೆ!  ಅದು 20 ಹಸುಗಳಿಂದ ಬಂದಿರೋ ಆದಾಯವಂತೆ, ಅದು ಹೆಂಗೆ ಅಂತ ನಮಗೂ ನಿಮಗೂ ಹೇಳಿಕೊಡೋಕೆ ಹೇಳಿ ಎಂದು ಹಾಸನ ಬಿಜೆಪಿ ಅಭ್ಯರ್ಥಿ ಎ. ಮಂಜು ಪ್ರಜ್ವಲ್ ರೇವಣ್ಣಗೆ ಟಾಂಗ್ ನೀಡುತ್ತಲೇ ಮಾ

ಅವರು ಹಾಲಿಂದ ಸಂಪಾದಿಸಿರೋ ಆಸ್ತಿ ಹೌದು, ಹಾಲು ಕರೆದಿಲ್ಲ. ಕೆಎಂಎಫ್ ಹಾಲು ಹೊಡೆದು ಸಂಪಾದಿಸಿರುವುದು ಎಂದು ಆರೋಪಿಸಿದರು. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ವಿರುದ್ದ ಎ.ಮಂಜು ವ್ಯಂಗ್ಯವಾಡುತ್ತಲೇ  ಮಾತನಾಡಿದ ಮಂಜು ರೇವಣ್ಣಂದು ಅದೇನೋ ಸ್ವಾತಿ ಪಾತಿ ನಕ್ಷತ್ರವಂತೆ, ಈ ಹಿಂದೆ ರೇವಣ್ಣ ಸೋತಿಲ್ವ ಎಂದು ಪ್ರಶ್ನೆ ಮಾಡಿದರು.

ಕೊನೆಗಳಿಗೆಯಲ್ಲಿ ಹಾಲಿ MP ಸಂಗಣ್ಣಗೆ ಟಿಕೆಟ್ ಸಿಕ್ಕಿದ್ದೇಗೆ..? ಇದು 'ಕರಡಿ' ಆಟ..!

ಅವರು ಬರೀ ಮಕ್ಕಳು, ಮೊಮ್ಮಕ್ಕಳು , ಮರಿಮಕ್ಕಳನ್ನು ರಾಜಕೀಯದಲ್ಲಿ ಬೆಳೆಸ್ತಾರೆ. ಅವರು ರಾಜ್ಯ ಉದ್ಧಾರಕ್ಕೆ ರಾಜಕೀಯ ಮಾಡ್ತಿಲ್ಲ, ಕುಟುಂಬ ಉದ್ದಾರಕ್ಕಾಗಿ ಮಾತ್ರ ಕುಟುಂಬ ರಾಜಕಾರಣ ವಿರುದ್ಧ ಮತ ನೀಡಿ, ನನಗೆ ಆಶೀರ್ವದಿಸಿ ಎಂದು ಮಂಜು ಮತಯಾಚನೆ ಮಾಡಿದರು.