ಭೋಪಾಲ್(ಮೇ.12): 2109ರ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಗಮನ ಸೆಳೆದ ಕ್ಷೇತ್ರಗಳ ಪೈಕಿ ಭೋಪಾಲ್ ಮತ ಕ್ಷೇತ್ರವೂ ಒಂದು. ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್ ಮತ್ತು ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ನಡುವಿನ ಕದನ ದೇಶದ ಗಮನ ಸೆಳೆದಿತ್ತು.

ಅದರಂತೆ ಇಂದು ಭೋಪಾಲ್ ಲೋಕಸಭಾ ಕ್ಷೇತ್ರಕ್ಕೆ ಮತದಾನವಾಗಿದ್ದು, ಇದೀಗ ಎಲ್ಲರ ಗಮನ ಮೇ.23ರ ಫಲಿತಾಂಶದ ಮೇಲಿದೆ.

ಈ ಮಧ್ಯೆ ಚುನಾವಣೆ ವೇಳೆ ಭರ್ಜರಿ ಪ್ರಚಾರ ನಡೆಸಿ ಗಮನ ಸೆಳೆದಿದ್ದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್, ತಮ್ಮ ಮತವನ್ನೇ ಚಲಾಯಿಸದೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಅಸಲಿಗೆ ದಿಗ್ವಿಜಯ್ ಸಿಂಗ್ ಭೋಪಾಲ್ ಮತದಾರರಾಗಿರದೇ ರಾಜಗರ್ ಕ್ಷೇತ್ರದ ಮತದಾರರಾಗಿದ್ದಾರೆ. ಇಂದೂ ರಾಜಗರ್‌ನಲ್ಲೂ ಮತದಾನ ನಡೆದಿದ್ದು, ಇದೇ ಕ್ಷೇತ್ರದಿಂದ ದಿಗ್ವಿಜಯ್ ಸಿಂಗ್ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಆದರೆ ಇಂದು ದಿನವೀಡಿ ಭೋಪಾಲ್‌ನಲ್ಲೇ ಉಳಿದಿದ್ದ ದಿಗ್ವಿಜಯ್ ಸಿಂಗ್ ಅವರಿಗೆ , ರಾಜಗರ್ ಗೆ ಹೋಗಿ ಮತ ಹಾಕಲು ಸಾಧ್ಯವಾಗಲಿಲ್ಲ.

ಇನ್ನು ದಿಗ್ವಿಜಯ್ ಮತ ಹಾಕದಿರಲು ಸಾಧ್ಯವಾಗದಿರುವುದಕ್ಕೆ ಬಿಜೆಪಿ ವ್ಯಂಗ್ಯವಾಡಿದೆ. ಸಿಎಂ ಕಮಲ್ ನಾಥ್ ಮಾತು ಕೇಳಿ ಭೋಪಾಲ್‌ಗೆ ಬಂದ ದಿಗ್ವಿಜಯ್ ತಮ್ಮ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಹೇಳಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ