ಮಂಡ್ಯ  :  ಲೋಕಸಭಾ ಚುನಾವಣೆ  ಮುಕ್ತಾಯವಾಗಿ ಫಲಿತಾಂಶಕ್ಕೆ ಇನ್ನೆರಡು ದಿನವಷ್ಟೇ ಬಾಕಿ ಉಳಿದಿದೆ. ಈಗಾಗಲೇ ಹಲವು ಎಕ್ಸಿಟ್ ಪೋಲ್  ಗಳ ವರದಿಯಲ್ಲಿ ಮಂಡ್ಯ ಫಲಿತಾಂಶದ ಬಗ್ಗೆ ಮಾಹಿತಿ ನೀಡಿವೆ. 

6 ಸಮೀಕ್ಷೆಗಳು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲ್ಲಲಿದ್ದಾರೆ ಎಂದು ಹೇಳಿದರೆ ನಾಲ್ಕು ಸಮೀಕ್ಷೆಗಳು ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲ್ಲಲಿದ್ದಾರೆ ಎಂದು ಒಂದು ರೀತಿಯ ಸಸ್ಪೆನ್ಸ್ ಉತ್ತರ ನೀಡಲಾಗಿದೆ. 

ಸಮೀಕ್ಷೆ ಬೆನ್ನಲ್ಲೇ ಮಂಡ್ಯದಲ್ಲಿ ಬೆಟ್ಟಿಂಗ್ ಕೂಡ ಜೋರಾಗಿದ್ದು, ಭಾರಿ ಲೆಕ್ಕಾಚಾರದಲ್ಲಿ ಜಿಲ್ಲೆಯ ಜನರು ತೊಡಗಿದ್ದಾರೆ. ಸಮೀಕ್ಷೆಗೂ ಮೊದಲು ಸುಮಲತಾ ಪರ 80 ಸಾವಿತ ಬೆಟ್ಟಿಂಗ್ ಕಟ್ಟುತ್ತಿದ್ದರೆ ನಿಖಿಲ್ ಪರವಾಗಿ 1 ಲಕ್ಷ ವರೆಗೆ ಬೆಟ್ಟಿಂಗ್ ನಡೆಯುತ್ತಿತ್ತು. 

ಆದರೆ ಸಮೀಕ್ಷೆ ವರದಿ ಬಂದ ಬೆನ್ನಲ್ಲೇ ಇಬ್ಬರ ಅಭಿಮಾನಿಗಳು ಸಮಬಲದ ಬೆಟ್ಟಿಂಗ್ ನಲ್ಲಿ ತೊಡಗಿದ್ದಾರೆ. 1 ಲಕ್ಷಕ್ಕೆ ಒಂದು ಲಕ್ಷದಷ್ಟೇ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. 

ಇನ್ನು ಸುಮಲತಾ ಪರ ಸಮೀಕ್ಷೆ ವರದಿಗಳು ಸಕಾರಾತ್ಮಕ ವರದಿ ನೀಡಿದ ಬೆನ್ನಲ್ಲೇ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.