Asianet Suvarna News Asianet Suvarna News

ಅಯ್ಯೋ...! ಸಂಸದರು ಕೋಟ್ಯಾಧೀಶರಾದ್ರೂ ಅವರ ಬಳಿ ಕಾರು ಇಲ್ಲ..!

ಬೆಳಗಾವಿ ಲೋಕಸಭೆ ಚುನಾವಣೆಗೆ ಸುರೇಶ ಅಂಗಡಿ ನಾಮಪತ್ರ ಸಲ್ಲಿಕೆ| ಚುನಾವಣೆ ನಾಮಪತ್ರ ವೇಳೆ ಆಸ್ತಿ ವಿವರ ಸಲ್ಲಿಸಿದ ಅಂಗಡಿ| 5 ವರ್ಷ ಅವಧಿಯಲ್ಲಿ 2 ಕೋಟಿ ರೂಪಾಯಿ ಆಸ್ತಿ ಹೆಚ್ಚಳ| ಸಂಸದರು ಕೋಟ್ಯಾಧೀಶರಾದ್ರು ಅವರ ಬಳಿ ಕಾರು ಇಲ್ಲ.

Belagavi Loksabha BJP Candidate Suresh Angadi Asset details
Author
Bengaluru, First Published Apr 4, 2019, 4:07 PM IST

ಬೆಳಗಾವಿ, (ಏ.4): ರಾಜ್ಯದಲ್ಲಿ 2ನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದು (ಗುರುವಾರ) ಕೊನೆ ದಿನವಾಗಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಸುರೇಶ ಅಂಗಡಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಸಹಸ್ರಾರು ಬೆಂಬಲಿಗರೊಂದಿಗೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಇನ್ನು ಇದೆ ವೇಳೆ ತಮ್ಮ ಹೆಸರಲ್ಲಿ 14.37 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಘೋಷಿಸಿದ್ದಾರೆ.

ಬೆಳಗಾವಿ ಕ್ಷೇತ್ರದಿಂದ 101 ಅಭ್ಯರ್ಥಿಗಳು ಕಣಕ್ಕೆ : ಇವಿಎಂ ಬದಲು ಬ್ಯಾಲೆಟ್ ಪೇಪರ್

ಸಂಸದರು ಕೋಟ್ಯಾಧೀಶರಾದ್ರು ಅವರ ಬಳಿ ಇಲ್ಲ ಕಾರು ಇಲ್ಲ ಎನ್ನುವುದು ಗಮನರ್ಹ. ಆದ್ರೆ 5 ವರ್ಷ ಅವಧಿಯಲ್ಲಿ 2 ಕೋಟಿ ರೂಪಾಯಿ ಆಸ್ತಿ ಹೆಚ್ಚಳವಾಗಿದೆ.

ಪತ್ನಿ ಹೆಸರಲ್ಲಿ 3.57 ಕೋಟಿ ಚರಾಸ್ತಿ ಹಾಗೂ 9.45 ಕೋಟಿ ಮೌಲ್ಯದ ಚಿರಾಸ್ತಿ ಇದೆ ಎಂದು ಸುರೇಶ್ ಅಂಗಡಿ ಅವರು ನಾಮಪತ್ರದಲ್ಲಿ ತಮ್ಮ ಆಸ್ತಿ ವಿವರವನ್ನು ಉಲ್ಲೇಖಿಸಿದ್ದಾರೆ.

ಈಗಾಗಲೇ ಎರಡು ಬಾರಿ ಸಂಸದರಾಗಿರುವ ಸುರೇಶ್ ಅಂಗಡಿ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಹಾಗೂ ,ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವೀಣಾ ಕಾಶಪ್ಪನವರ್ ಇದೇ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

2ನೇ ಹಂತದಲ್ಲಿ ಇದೇ ಏ 23ಕ್ಕೆ ಮತದಾನ ನಡೆಯಲಿದ್ದು, ಮೇ 23ಕ್ಕೆ ಮತ ಎಣಿಕೆ ನಡೆಯಲಿದೆ.

Follow Us:
Download App:
  • android
  • ios