ಬೆಳಗಾವಿ[ಏ. 17]  ಬೆಳಗಾವಿಯಲ್ಲಿ ಕಾಂಗ್ರೆಸ್ ಪರ ಪ್ರಚಾರ  ಮಾಡಿದ, ಸತೀಶ ಜಾರಕಿಹೊಳಿ ಮತ್ತು  ಲಖನ್ ಜಾರಕಿಹೊಳಿ ಮಾತನಾಡಿತ್ತಾ ರಮೇಶ ಜಾರಕೊಹೊಳಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿರುವ ವಿಚಾರ ತಿಳಿಸಿದ್ದಾರೆ.

ರಮೇಶ ಜಾರಕಿಹೊಳಿ ಪಕ್ಷದಲ್ಲಿ ಇರೋಲ್ಲ ಎಂಬ ಸಂದೇಶ ಬಂದಿದೆ‌. ಬಿಜೆಪಿ ಪರ ಮಾಜಿ ಸಚಿವ ರಮೇಶ ಜಾರಕಿಹೊಳಿ ಕೆಲಸ ಮಾಡುತ್ತಿದ್ದಾರೆ. ಗೋಕಾಕ್ ವಿಧಾನ ಸಭೆ ಕ್ಷೇತ್ರದಲ್ಲಿ ರಮೇಶ್ ಗೆ ಪರ್ಯಾಯ ಅಂದರೆ ಲಖನ್. ರಮೇಶ ಜಾರಕಿಹೊಳಿ ವಿರುದ್ಧ ಹೈಕಮಾಂಡ್ ಗೆ ಲಿಖಿತ ದೂರು ಸಲ್ಲಿಕೆಯಾಗಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ದೂರು ನೀಡಲಾಗಿದೆ. ಚಿಕ್ಕೋಡಿ, ನಿಪ್ಪಾಣಿಯಲ್ಲಿ ಬಿಜೆಪಿ ಪರ ಕೆಲಸ ಮಾಡಿರೋದು ಗೊತ್ತಾಗಿದೆ ಎಂದರು.

ರಮೇಶ ಜಾರಕಿಹೊಳಿ ತಟಸ್ಥರಾಗಿ ಉಳಿದಿದ್ದಾರೆ. ಆದ್ದರಿಂದ ನಾವೇ ಕಾಂಗ್ರೆಸ್ ಪಕ್ಷದ ಪರ ಗೋಕಾಕ್ ತಾಲೂಕಿನ ಪ್ರಚಾರ ಮಾಡುತ್ತಿದ್ದೇವೆ. ರಮೇಶ ಜಾರಕಿಹೊಳಿ, ನಾನು ಮುಖ್ಯವಲ್ಲ ಪಕ್ಷ ಮುಖ್ಯ. ರಮೇಶ ಜಾರಕಿಹೊಳಿ ಪಕ್ಷದ ಕೆಲಸ ಮಾಡಲು ಆಸಕ್ತಿ ವಹಿಸುತ್ತಿಲ್ಲ ಎಂದು ಹೇಳಿದರು.

ಬಿಜೆಪಿಯ  ಸುರೇಶ ಅಂಗಡಿ ಪಕ್ಷ, ಜಿಲ್ಲೆ, ಸಮಾಜಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಅಭಿವೃದ್ಧಿಯಲ್ಲಿ ನನಗಿಂತ ನೂರು ಮೈಲಿ ಹಿಂದೆ ಇದ್ದಾನೆ. ಸುರೇಶ ಅಂಗಡಿ ಜಾತಕ ಬಲವಿದೆ ಎಂದು  ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಗೆಲ್ಲುವುದು ಬಿಡುವುದು ಬೇರೆ ವಿಚಾರ. ಚುನಾವಣೆ ಜನರ ಆಶೀರ್ವಾದ ಮುಖ್ಯ. ಬಿಜೆಪಿ ಪಕ್ಷ ಜಾತಕ, ಪಂಚಾಂಗ ನಂಬಿರೋ ಮನುವಾದಿಗಳ ಪಕ್ಷ ಎಂದು ಆರೋಪಿಸಿದರು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.