ಬೆಂಗಳೂರು[ಏ. 19]  ಬೆಂಗಳೂರು ಮಾಜಿ ಮೇಯರ್ ಕಟ್ಟೆ ಸತ್ಯ ನಾರಾಯಣ ಸುದ್ದಿಗೋಷ್ಠಿ ನಡೆಸಿ ಅನೇಕ ವಿಚಾರಗಳನ್ನು ಹೇಳಿದ್ದಾರೆ. ವಿಶೇಷ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೇಳಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಚುನಾವಣೆಯಲ್ಲಿ ಮತದಾನದಿಂದ ವಂಚಿತರಾಗಿರುವ ಮತದಾರರಿಗೆ ಅವಕಾಶ ಮಾಡಿಕೊಡುವಂತೆ ಆಗ್ರಹ ಮಾಡಿರುವ ನಾರಾಯಣ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸುಮಾರು 40 ಸಾವಿರ ಜನ ಮತದಾನದಿಂದ ವಂಚಿತರಾಗಿದ್ದಾರೆ. ಚುನಾವಣಾ ಆಯೋಗ ಸಿದ್ಧ ಪಡಿಸಿರುವ ಮತದಾರರ ಪಟ್ಟಿಯಲ್ಲಿ ನಲ್ಲಿ ಹಲವರ ಹೆಸರುಗಳು ಇಲ್ಲ. ರಾವ್ ,ಕಷ್ಯಪ್, ಐಯಂಗಾರ್ ಅಂತ ಇರುವ ಹಲವರ ಹೆಸರುಗಳು ಮಾಯವಾಗಿರುವಂತೆದ್ದು ಅನುಮಾನ ಮೂಡಿಸಿದೆ ಎಂದಿದ್ದಾರೆ.

ಫಲಿತಾಂಶಕ್ಕೂ ಮುನ್ನವೇ ನಿಖಿಲ್ ಕೆ. ಸಂಸದರು, ಮಂಡ್ಯ!

ಇವರೆಲ್ಲ ಬಿಜೆಪಿ ವೋಟರ್ಸ್ ಅನ್ನೋ ಕಾರಣಕ್ಕೆ ಹೆಸರು ಡಿಲೀಟ್ ಮಾಡಲಾಗಿದ್ಯಾ?  ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮತ ಹಾಕಿದ್ದಾರೆ. ಆದರೆ ಈ ಚುನಾವಣೆಯಲ್ಲಿ ಮತಪಟ್ಟಿಯಲ್ಲಿ ಅವರ ಹೆಸರಿಲ್ಲ. ಪ್ರಖ್ಯಾತ ಗಾಯಕ ಸಿ. ಅಶ್ವತ್ ಅವರ ಶ್ರೀಮತಿ ಚಂದ್ರ ಅವರ ಹೆಸರಿಲ್ಲ. ಫಲಿತಾಂಶ ಬರೋದಕ್ಕೆ ಒಂದು ತಿಂಗಳು ಇದ್ದು ಮತದಾನದಿಂದ ವಂಚಿತರಾಗಿರುವವರಿಗೆ ಮತದಾನ‌ ಮಾಡಲು ಅವಕಾಶ ಮಾಡಿಕೊಡಬೇಕು ಎಂದಿದ್ದಾರೆ.

ಆರ್ ಓ‌, ಎಆರ್ ಅಧಿಕಾರಿಗಳನ್ನು ಕೇಳಿದ್ರೆ ಸಾಫ್ಟ್ ವೇರ್ ಮಿಸ್ ಆಗಿದೆ ಅಂತ ಹೇಳ್ತಾ ಇದ್ದಾರೆ. ವೆಬ್ ಸೆಟ್ ನಲ್ಲಿ‌, ಆ್ಯಪ್ ನಲ್ಲಿ ನಮ್ಮ‌ ವೋಟರ್ ಐಡಿ‌ ಹೆಸರು ಇದೆ ಆದ್ರೇ ಮತ ಚಲಾಯಿಸೋದಕ್ಕೆ ಮತಗಟ್ಟೆಗೆ ಹೋದ್ರೆ ನಮ್ಮ‌ ಹೆಸರು ಇಲ್ಲ ಅಂದ್ರೆ ಇದರ ಹಿಂದೆ ಯಾರದೋ ಕೈವಾಡ ಇದ್ದು ಪತ್ತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.