ಬೆಂಗಳೂರು[ಏ. 15]  ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ಮತ್ತು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಬ್ರಾಹ್ಮಣ ಬೆಂಬಲಿಗರ ಕಿತ್ತಾಟ ನಡೆಸಿದ್ದಾರೆ. ಈ ಕಿತ್ತಾಟಕ್ಕೆ ವೇದಿಕೆಯಾಗಿದ್ದು  ದಕ್ಷಿಣ ವಿಭಾಗ ವಿಪ್ರ ಬ್ರಾಹ್ಮಣ ಸಭೆ.

ಕಾಂಗ್ರೆಸ್ ಅಭ್ಯರ್ಥಿ ಬಿಕೆ‌ ಹರಿಪ್ರಸಾದ್  ಅವರಿಗಾಗಿ ಸಭೆ ಆಯೋಜಿಸಲಾಗಿತ್ತು. ಬನಶಂಕರಿ 2ನೇ ಹಂತದಲ್ಲಿರುವ ಬನಗಿರಿ ವರಸಿದ್ಧಿ ವಿನಾಯಕ ದೇಗುಲದಲ್ಲಿ ಸಭೆ ಆಯೋಜನೆ ಮಾಡಲಾಗಿತ್ತು. 

ಸಿದ್ದುಗೆ ಸಂವಿಧಾನವೇ ಗೊತ್ತಿಲ್ಲ, ಹೆಗಡೆ ಒಂದು ಸಾಲನ್ನೂ ಓದಿಲ್ಲ: ಬಿಜೆಪಿ ಅಭ್ಯರ್ಥಿ

ಈ ವೇಳೆ ಸಭೆಯಲ್ಲಿದ್ದ  ಕಾಂಗ್ರೆಸ್ ನಾಯಕಿ ಮಂಜುಳಾ ನಾಯ್ಡು, ತೇಜಸ್ವಿ ಸೂರ್ಯಗೆ ಮತ ಹಾಕಲ್ಲ. ಬಿಕೆ ಹರಿಪ್ರಸಾದ್ ಗೆ ನಮ್ಮ ಬೆಂಬಲ ಎಂದು ಘೋಷಣೆ ಮಾಡಿದ್ದು ಗೊಂದಲಕ್ಕೆ ಕಾರಣವಾಯಿತು.  ಒಂದು ಬ್ರಾಹ್ಮಣ ಬಣ ತೇಜಸ್ವಿ ಸೂರ್ಯಗೆ ಧಿಕ್ಕಾರ ಎಂದು ಕೂಗುತ್ತಿದ್ದಂತೆ ಮತ್ತೊಂದು ಬ್ರಾಹ್ಮಣ ಬಣದಿಂದ ಆಕ್ರೋಶ  ಎದುರಾಯಿತು. ಈ ವೇಳೆ ಮೋದಿ ಮೋದಿ  ಎಂಬ ಘೋಷಣೆ ಕೇಳಿ ಬಂದರೂ ಕಿತ್ತಾಟ ಮುಂದುವರಿದೆ ಇತ್ತು.

 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.