ಬಾಗಲಕೋಟೆ(ಏ. 17)  ಬಾಗಲಕೋಟೆ ಲೋಕಸಭಾ ಕ್ಷೇತ್ರದ  ಬಿಜೆಪಿ ಅಭ್ಯರ್ಥಿಗೆ ಸದ್ದಿಲ್ಲದೆ ಆಘಾತವೊಂದು ಎದುರಾಗಿದೆ.  ಮೈತ್ರಿ ಅಭ್ಯರ್ಥಿಯೊಂದಿಗೆ ಬಿಜೆಪಿ ಯುವ ಮುಖಂಡ ಚರ್ಚೆ ಮಾಡುತ್ತಿರುವ ಫೋಟೋ ವೈರಲ್ ಆಗಿದ್ದು ಹಲವಾರು ಪ್ರಶ್ನೆಗಳನ್ನು ಎತ್ತಿದೆ.

ಮಾಜಿ ಸಚಿವ ಮುರುಗೇಶ್ ನಿರಾಣಿ ಸಹೋದರ ಸಂಗಮೇಶ್ ನಿರಾಣಿ ಕೈ ಅಭ್ಯರ್ಥಿಗೆ ನೀಡ್ತಿದಾರಾ  ಬೆಂಬಲ ನೀಡಿದ್ರಾ ಎನ್ನುವ ಪ್ರಶ್ನೆ ಮೂಡಿದೆ.  ಬಾಗಲಕೋಟೆ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ್ ಯೊಂದಿಗೆ ಸಂಗಮೇಶ್ ನಿರಾಣಿ ಚರ್ಚೆ ಪೋಟೋ ವೈರಲ್ ಆಗಿದ್ದು ಜಿಲ್ಲಾ ರಾಜಕಾರಣದಲ್ಲಿ ಹಲವು ಪ್ರಶ್ನೆ ಎತ್ತಿದೆ.

ವೋಟ್ ಮಾಡೋದು ಹೇಗೆ? ಇಲ್ಲಿದೆ ಸುಲಭ- ಸರಳ ಗೈಡ್

ತೇರದಾಳ, ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಸಂಗಮೇಶ್ ನಿರಾಣಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಸಾಧ್ಯತೆ ಇದೆ ಎನ್ನಲಾಗಿದೆ. ಮೈತ್ರಿ ಅಭ್ಯರ್ಥಿ ವೀಣಾ ಪಂಚಮಸಾಲಿ ಸಮಾಜಕ್ಕೆ ಸೇರಿರೋದ್ರಿಂದ ಅದೇ ಸಮಾಜದ ಸಂಗಮೇಶ್ ನಿರಾಣಿ ಬೆಂಬಲ ನೀಡಿದ್ರಾ ಎನ್ನುವ ಮಾತು ಕೇಳಿ ಬಂದಿದೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಸಾಕ ಪ್ರಭಾವ ಹೊಂದಿರುವ ಸಂಗಮೇಶ್ ನಿರಾಣಿ ಕಾಂಗ್ರೆಸ್ ಪರ ಪ್ರಚಾರ ಮಾಡಿದರೆ ಬಿಜೆಪಿಗೆ ಸವಾಲು ಎದುರಾಗುವುದು ಖಂಡಿತ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.