'ಮೋದಿ-ನಿತೀಶ್ ಜೋಡಿ ಲೈಲಾ-ಮಜ್ನುಗಿಂತ ಫೇಮಸ್'| ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ವ್ಯಂಗ್ಯ| ಲೈಲಾ-ಮಜ್ನುವಿಗಿಂತ ಸ್ಟ್ರಾಂಗ್ ಜೋಡಿ ಎಂದ ಒವೈಸಿ| 'ಮೋದಿ-ನಿತೀಶ್ ಜೋಡಿಯಲ್ಲಿ ಯಾರು ಲೈಲಾ ಯಾರು ಮಜ್ನು ಎಂದು ಕೇಳಬೇಡಿ'| ಮೋದಿ-ನಿತೀಶ್ ಜೋಡಿಯಿಂದ ಕೋಮು ಸೌಹಾರ್ದತೆಗೆ ಧಕ್ಕೆ ಎಂದ ಒವೈಸಿ| |ಒವೈಸಿ ಹೇಳಿಕೆಯನ್ನು ಖಂಡಿಸಿದ ಬಿಜೆಪಿ, ಜೆಡಿಯು|

ಹೈದರಾಬಾದ್(ಏ.14): ಪ್ರಧಾನಿ ಮೋದಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರದ್ದು ಲೈಲಾ-ಮಜ್ನು ಅವರಿಗಿಂತಲೂ ಫೇಮಸ್ ಜೋಡಿ ಎಂದು ಎಐಎಂಎಂ ನಾಯಕ ಅಸದುದ್ದೀನ್ ಒವೈಸಿ ಲೇವಡಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಹೈದರಾಬಾದ್‌ನಲ್ಲಿ ಮಾತನಾಡಿರುವ ಒವೈಸಿ ಮೋದಿ-ನಿತೀಶ್ ಪ್ರೀತಿ ಲೈಲಾ-ಮಜ್ನು ಅವರಿಗಿಂತಲೂ ಸ್ಟ್ರಾಂಗ್ ಆಗಿದೆ. ಇವರಿಬ್ಬರೂ ಸೇರಿದರೆ ದೇಶದ ಕೋಮು ಸೌಹಾರ್ದತೆ ನಾಶವಾಯ್ತು ಎಂದೇ ಅರ್ಥ ಎಂದು ಒವೈಸಿ ಕಿಡಿಕಾರಿದ್ದಾರೆ.

Scroll to load tweet…

ಆದರೆ ಮೋದಿ-ನಿತೀಶ್ ಜೋಡಿಯಲ್ಲಿ ಯಾರು ಲೈಲಾ ಯಾರು ಮಜ್ನು ಎಂದು ಮಾತ್ರ ಕೇಳಬೇಡಿ ಎಂದು ಒವೈಸಿ ಕುಹುಕವಾಡಿದ್ದಾರೆ. ಒವೈಸಿ ಹೇಳಿಕೆಯನ್ನು ಬಿಜೆಪಿ ಮತ್ತು ಜೆಡಿಯು ತೀವ್ರತವಾಗಿ ಖಂಡಿಸಿವೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.