Asianet Suvarna News Asianet Suvarna News

‘1988ರಲ್ಲಿ ಡಿಜಿಟಲ್ ಕ್ಯಾಮರಾ ಹೊಂದಿದ್ದ ಮೋದಿಯನ್ನು ನಂಬಲಾಗಲ್ಲ’!

ಮೋದಿ ಹೇಳಿಕೆಗಳನ್ನೇ ಬಂಡವಾಳ ಮಾಡಿಕೊಂಡ ಪ್ರತಿಪಕ್ಷಗಳು| 1988ರಲ್ಲೇ ಡಿಜಿಟಲ್ ಕ್ಯಾಮರಾ, ಇ-ಮೇಲ್ ಹೊಂದಿದ್ದಾಗಿ ಹೇಳಿದ್ದ ಮೋದಿ| ರಾಷ್ಟ್ರದ ಭದ್ರತೆ ವಿಚಾರದಲ್ಲಿ ಮೋದಿ ಅವರನ್ನು ನಂಬಲಾಗಲ್ಲ ಎಂದ ಒವೈಸಿ| ಮೋದಿ ಹೇಳಿಕೆಗೆ ವ್ಯಂಗ್ಯವಾಡಿದ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ| ಡಿಜಿಟಲ್ ಕ್ಯಾಮರಾ ಭಾರತದ ಮಾರುಕಟ್ಟೆಗೆ ಬಂದಿದ್ದು 1990ರಲ್ಲಿ|
Asaduddin Owaisi  Mocks PM Modi Digital Camera Claim
Author
Bengaluru, First Published May 14, 2019, 11:41 AM IST

ಹೈದರಾಬಾದ್(ಮೇ.14): ಮೋಡ ಕವಿದ ವಾತಾವರಣ ಮತ್ತು ಭಾರೀ ಮಳೆಯ ಲಾಭ ಪಡೆದು ಬಾಲಾಕೋಟ್ ದಾಳಿ ಮಾಡಲಾಯ್ತು ಎಂಬ ಪ್ರಧಾನಿ ಮೋದಿ ಹೇಳಿಕೆ ಈಗಾಗಲೇ ವ್ಯಂಗ್ಯದ ಬಾಣಕ್ಕೆ ಗುರಿಯಾಗಿದೆ. ಇದೀಗ ಮೋದಿ ಅವರ ಮತ್ತೊಂದು ಹೇಳಿಕೆಯನ್ನು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ವ್ಯಂಗ್ಯವಾಡಿದ್ದಾರೆ.

ತಾವು 1988ರಲ್ಲಿ ಡಿಜಿಟಲ್ ಕ್ಯಾಮರಾವನ್ನು ಬಳಸಿದ್ದು, ಇ-ಮೇಲ್ ಸಹ ಹೊಂದಿದ್ದಾಗಿ ಪ್ರಧಾನಿ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಮೋದಿ ಅವರ ಈ ಹೇಳಿಕೆಯನ್ನು ಕುಹುಕವಾಡಿರುವ ಒವೈಸಿ, ಹಣವಿಲ್ಲವೆಂದು ಪರ್ಸ್ ಹೊಂದಿರದ ವ್ಯಕ್ತಿ, 1998ರಲ್ಲಿ ಡಿಜಿಟಲ್ ಕ್ಯಾಮರಾ ಮತ್ತು ಇ-ಮೇಲ್ ವಿಳಾಸ ಹೊಂದಿರಲು ಹೇಗೆ ಸಾಧ್ಯ ಎಂದು ಕೇಳಿದ್ದಾರೆ.

ರಾಷ್ಟ್ರದ ಭದ್ರತೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನಂಬಲು ಸಾಧ್ಯವಿಲ್ಲ ಎಂದಿರುವ ಅಸದುದ್ದೀನ್, ಮೋದಿ ಕೇವಲ ಇಂತಹ ಹಾಸ್ಯಾಸ್ಪದ ಮಾತುಗಳನ್ನೇ ಕಾಲ ಕಳೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

1988ರಲ್ಲಿ ಬಿಜೆಪಿ ನಾಯಕ ಎಲ್.ಕೆ ಆಡ್ವಾಣಿಯವರ ಕಲರ್ ಫೋಟೋವನ್ನು ಡಿಜಿಟಲ್ ಕ್ಯಾಮರಾದಲ್ಲಿ ತೆಗೆದಿದ್ದಾಗಿ ಮೋದಿ ಸಂದರ್ಶನದಲ್ಲಿ ಹೇಳಿದ್ದರು. ಅಲ್ಲದೇ ಆ ಸಮಯದಲ್ಲೇ ತಮ್ಮ ಬಳಿ ಇ-ಮೇಲ್ ವಿಳಾಸ ಇತ್ತು ಎಂದು ಪ್ರಧಾನಿ ತಿಳಿಸಿದ್ದರು.

ಮೋದಿ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಡಿಜಿಟಲ್ ಕ್ಯಾಮರಾ ಭಾರತದ ಮಾರುಕಟ್ಟೆಗೆ 1990ರ ಬಳಿಕ ಬಂದಿದ್ದು, ಆ ಸಮಯದಲ್ಲಿ ಭಾರತದಲ್ಲಿ ಇ-ಮೇಲ್ ಕೂಡ ಇರಲಿಲ್ಲ ಎಂದು ಹಲವರು ಟ್ವಿಟ್ ಮಾಡಿ ವ್ಯಂಗ್ಯವಾಡಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios