ನವದೆಹಲಿ[ಮೇ.21]: 'ನನ್ನ ಭದ್ರತಾ ಸಿಬ್ಬಂದಿಯಲ್ಲ, ಪ್ರಧಾನಿ ಮೋದಿಯೇ ನನ್ನನ್ನು ಕೊಲ್ಲಲು ಬಯಸಿದ್ದಾರೆ' ಎನ್ನುವ ಮೂಲಕ ಅರವಿಂದ್ ಕೇಜ್ರೀವಾಲ್ ಬಿಜೆಪಿ ನಾಯಕ ವಿಜಯ್ ಗೋಯಲ್ ಗೆ ತಿರುಗೇಟು ನೀಡಿದ್ದಾರೆ. 

ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದ ಕೇಜ್ರಿವಾಲ್ ಅವರಿಗೆ ಟ್ವೀಟ್ ಮೂಲಕ ಟಾಂಗ್ ನೀಡಿದ್ದ ಬಿಜೆಪಿ ನಾಯಕ ವಿಜಯ್ ಗೋಯಲ್ 'ನನ್ನ ಭದ್ರತಾ ಸಿಬ್ಬಂದಿಯ ಮೇಲೆ ಅನುಮಾನ ವ್ಯಕ್ತಪಡಿಸಿ ದೆಹಲಿ ಪೊಲೀಸ್ ಇಲಾಖೆಗೆ ಅವಮಾನ ಮಾಡಿದ್ದೀರೆಂದು ನನಗೆ ದುಃಖವಾಗುತ್ತಿದೆ. ಹೀಗಾಗಿ ನಿಮ್ಮ ಭದ್ರತಾ ಸಿಬ್ಬಂದಿಯನ್ನು ನೀವೇ ಆಯ್ಕೆ ಮಾಡಿ. ಈ ವಿಚಾರದಲ್ಲಿ ನಿಮಗೆ ನನ್ನ ಸಹಾಯ ಬೇಕಿದ್ದರೆ ತಿಳಿಸಿ' ಎಂದು ಟ್ವೀಟ್ ಮಾಡಿದ್ದರು. 

ಆದರೀಗ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕೇಜ್ರೀವಾಲ್ 'ವಿಜಯ್ ಜೀ, ನ್ನ ಭದ್ರತಾ ಸಿಬ್ಬಂದಿಯಲ್ಲ, ಪ್ರಧಾನಿ ಮೋದಿಯೇ ನನ್ನನ್ನು ಕೊಲ್ಲಲು ಬಯಸಿದ್ದಾರೆ' ಎಂದು ತಿರುಗೇಟು ನೀಡಿದ್ದಾರೆ.