Asianet Suvarna News Asianet Suvarna News

ಕಾಂಗ್ರೆಸ್ ಪ್ರಣಾಳಿಕೆ ಅಪಾಯಕಾರಿ, ಜಾರಿ ಸಾಧ್ಯವಿಲ್ಲ: ಬಿಜೆಪಿ!

2019ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ| ಕಾಂಗ್ರೆಸ್ ಪ್ರಣಾಳಿಕೆ ಅಪಾಯಕಾರಿ ಎಂದ ಬಿಜೆಪಿ| ಕಾಂಗ್ರೆಸ್ ಪ್ರಣಾಳಿಕೆಯನ್ನು ಟುಕ್ಡೆ ಗ್ಯಾಂಗ್ ಸಿದ್ಧಪಡಿಸಿದೆ ಎಂದ ಅರುಣ್ ಜೇಟ್ಲಿ| ರಾಷ್ಟ್ರದ್ರೋಹದ ಕಾನೂನು ರದ್ದುಗೊಳಿಸುವ ಪ್ರಸ್ತಾವನೆಗೆ ವಿರೋಧ| 

Arun Jaitley Says Congress Manifesto Dangerous And Unimplementable
Author
Bengaluru, First Published Apr 2, 2019, 6:38 PM IST

ನವದೆಹಲಿ(ಏ.02): 2019ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಅಪಾಯಕಾರಿ ಪ್ರಣಾಳಿಕೆ ಎಂದು ಬಿಜೆಪಿ ಪ್ರತಿಕ್ರಿಯೆ ನೀಡಿದೆ. 

ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಕಾಂಗ್ರೆಸ್ ಪ್ರಣಾಳಿಕೆ ಅಪಾಯಕಾರಿಯಾಗಿದ್ದು ಜಾರಿಗೆ ತರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ಪ್ರಣಾಳಿಕೆ ಭಾರತವನ್ನು ಒಡೆಯುವ ಅಜೆಂಡಾ ಹೊಂದಿದೆ. ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸಲು ನೆಪ ಮಾತ್ರಕ್ಕೆ ಸಮಿತಿ ನೇಮಿಸಿ, ರಾಹುಲ್ ಗಾಂಧಿ ಆಪ್ತ ಟುಕ್ಡೆ ಗ್ಯಾಂಗ್ ನಿಂದ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ ಎಂದು ಜೇಟ್ಲಿ ಆರೋಪಿಸಿದ್ದಾರೆ. 

ಜಮ್ಮು-ಕಾಶ್ಮೀರದ ವಿಷಯದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ನೋಡಿದರೆ ಆತಂಕಕವಾಗುತ್ತದೆ ಎಂದು ಅರುಣ್ ಜೇಟ್ಲಿ ಕಾಂಗ್ರೆಸ್ ಪ್ರಣಾಳಿಕೆ ಕುರಿತು ಕಿಡಿ ಕಾರಿದ್ದಾರೆ.

ರಾಷ್ಟ್ರದ್ರೋಹದ ಕಾನೂನನ್ನೇ ರದ್ದುಗೊಳಿಸುವ ಪ್ರಣಾಳಿಕೆಗೆ ಒಂದೇ ಒಂದು ಮತವೂ ಅರ್ಹವಲ್ಲ ಎಂದು ಜೇಟ್ಲಿ ಹರಿಹಾಯ್ದಿದ್ದಾರೆ.

Follow Us:
Download App:
  • android
  • ios