ಚಿಕ್ಕೋಡಿ[ಮೇ.24]: ಮಗನ ವಿರುದ್ಧ ಸೋಲುಂಡಿದ್ದ ಅಣ್ಣಾಸಾಹೇಬ ಜೊಲ್ಲೆ, ಅಪ್ಪನ ವಿರುದ್ಧ ಸೆಣಸಿ ಗೆಲುವು ಸಾಧಿಸಿದ್ದಾರೆ.

ಹೌದು, ಕಳೆದ 2014ರ ವಿಧಾನಸಭೆಯ ಚುನಾವಣೆಯಲ್ಲಿ ಚಿಕ್ಕೋಡಿ ಮತಕ್ಷೇತ್ರದಿಂದ ಶಾಸಕ ಗಣೇಶ್ ಹುಕ್ಕೇರಿ ವಿರುದ್ಧ ಅಣ್ಣಾಸಾಹೇಬಿ ಜೊಲ್ಲೆ ಸೋಲುಂಡಿದ್ದರು. ಆದರೆ, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಶಾಸಕ ಗಣೇಶ್ ತಂದೆ ಪ್ರಕಾಶ್ ಹುಕ್ಕೇರಿ ವಿರುದ್ಧ 1ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

ಈ ಮೂಲಕ ವಿಧಾನಸಭೆಯಲ್ಲಿ ಸೋತಿದ್ದ ಲೆಕ್ಕಾಚಾರವನ್ನು ಲೋಕಸಭೆಯಲ್ಲಿ ಚುಕ್ತಾ ಮಾಡಿದ್ದಾರೆ.