Asianet Suvarna News Asianet Suvarna News

ಮಗನನ್ನು ಕಣಕ್ಕಿಳಿಸಿದ ಕಾಂಗ್ರೆಸ್: ಸಚಿವ ಸ್ಥಾನ ತೊರೆದ ಬಿಜೆಪಿ ನಾಯಕ!

ಅಪ್ಪ, ಮಗ ಕಾಂಗ್ರೆಸ್ ಸೇರಿದ್ದಕ್ಕೆ ಸಚಿವ ಸ್ಥಾನ ತ್ಯಜಿಸಿದ ಅನಿಲ್ ಶರ್ಮಾ| ಹಿಮಾಚಲ ಪ್ರದೇಶದ ಇಂಧನ ಸಚಿವರಾಗಿದ್ದ ಅನಿಲ್ ಶರ್ಮಾ| ಮಂಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಪುತ್ರ ಆಶ್ರಯ್ ಶರ್ಮಾ| ಅನಿಲ್ ಶರ್ಮಾ ತಂದೆ ಸುಖ್ ರಾಮ್ ಶರ್ಮಾ ಕೂಡ ಕಾಂಗ್ರೆಸ್ ಸೇರ್ಪಡೆ| ಪುತ್ರನ ವಿರುದ್ಧ ಪ್ರಚಾರ ಮಾಡದಿರಲು ಅನಿಲ್ ಶರ್ಮಾ ನಿರ್ಧಾರ| ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅನಿಲ್ ಶರ್ಮಾ|

Anil Sharma Resigns Himachal Pradesh Govt As Son Joins Congress
Author
Bengaluru, First Published Apr 12, 2019, 7:00 PM IST

ಶಿಮ್ಲಾ(ಏ.12): ತಮ್ಮ ಮಗನನ್ನು ಕಾಂಗ್ರೆಸ್ ಪಕ್ಷ ಲೋಕಸಭಾ ಅಭ್ಯರ್ಥಿಯಾಗಿ ಘೋಷಿಸಿದ ಕಾರಣಕ್ಕೆ, ಹಿಮಾಚಲ ಪ್ರದೇಶ ಇಂಧನ ಸಚಿವ ಅನಿಲ್ ಶರ್ಮಾ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅನಿಲ್ ಶರ್ಮಾ ಅವರ ಪುತ್ರ ಆಶ್ರಯ್ ಶರ್ಮಾ ಅವರನ್ನು ಕಾಂಗ್ರೆಸ್ ಮಂಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಅನಿಲ್ ಶರ್ಮಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಅನಿಲ್ ಶರ್ಮಾ ತಂದೆ, ಮಾಜಿ ಕೇಂದ್ರ ಸಚಿವ ಸುಖ್ ರಾಮ್ ಶರ್ಮಾ ಮತ್ತು ನಿಲ್ ಶರ್ಮಾ ಪುತ್ರ ಆಶ್ರಯ್ ಶರ್ಮಾ ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷ ಸೇರಿದ್ದರು.

ಅದರಂತೆ ಪುತ್ರನ ವಿರುದ್ಧ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವುದಿಲ್ಲ ಎಂದು ಅನಿಲ್ ಶರ್ಮಾ ಸ್ಪಷ್ಟಪಡಿಸಿದ್ದರು. ಅನಿಲ್ ಶರ್ಮಾ ಅವರ ಈ ನಿರ್ಧಾರ ಬಿಜೆಪಿಯನ್ನು ಕೆರಳಿಸಿತ್ತು.

ದೇಶದಲ್ಲಿ ಏ.11 ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios