ದೇಶದಲ್ಲಿ ಲೋಕಸಭಾ ಚುನಾವಣಾ ಕಾವೂ ಹೆಚ್ಚಾಗುತ್ತಲೇ ಇದ್ದು, ಫಲಿತಾಂಶದ ಕುತೂಹಲ ಗರಿಗೆದರಿದೆ. ಅಧಿಕಾರಕ್ಕೆ  ಏರುವ ತವಕ ಎಲ್ಲಾ ಪಕ್ಷಗಳಲ್ಲಿಯೂ ಹೆಚ್ಚಿದೆ. 

ನವದೆಹಲಿ : ದೇಶದಲ್ಲಿ ಲೋಕಸಭಾ ಚುನಾವಣಾ ಕಾವು ಹೆಚ್ಚಿದ್ದು, ಈಗಾಗಲೇ ಐದು ಹಂತದ ಚುನಾವಣೆ ಮುಕ್ತಾಯವಾಗಿದೆ. 

ವಿವಿಧ ಪಕ್ಷಗಳು ಅಧಿಕಾರಕ್ಕೆ ಏರುವ ಸತತ ಪ್ರಯತ್ನ ನಡೆಸುತ್ತಿದ್ದು, ಒಂದು ವೇಳೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಅಮಿತ್ ಶಾ ಗೃಹ ಸಚಿವರಾಗಲಿದ್ದಾರೆ ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 

ಜನರು ಈ ಬಗ್ಗೆ ಯೋಚನೆ ಮಾಡಬೇಕು. ಅಮಿತ್ ಶಾ ಗೃಹ ಸಚಿವರಾದಲ್ಲಿ ದೇಶದಲ್ಲಿ ಏನಾಗಬಹುದು ಎಂದು ಜನ ಯೋಚಿಸಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ. ಮತದಾನ ಮಾಡುವ ಮುನ್ನ ಯೋಚಿಸಿ ಎಂದು ಜನರಿಗೆ ಅಮಿತ್ ಶಾ ಟ್ವೀಟ್ ನಲ್ಲಿ ಹೇಳಿದ್ದಾರೆ. 

Scroll to load tweet…

ಅಲ್ಲದೇ ತಮ್ಮ ಟ್ವೀಟ್ ಅನ್ನು ಪೋಲಿಂಗ್ ಏಜೆನ್ಸಿಗೆ ಟ್ಯಾಗ್ ಮಾಡಿದ್ದು, ಮೋದಿ ಅಧಿಕಾರಕ್ಕೆ ಬಂದಲ್ಲಿ ಶಾ ಗೃಹ ಸಚಿವರಾಗಿ ತಮಗೆ ತಾವೇ ಬಿಂಬಿಸಿಕೊಳ್ಳುತ್ತಾರೆ. ಆದರೆ ಮಾಜಿ ಆರ್ಥಿಕ ಸಲಹೆಗಾರ ಅರವಿಂದ್ ವೀರಮಣಿ ಅಥವಾ ಮಾಜಿ ಆರ್ ಬಿಐ ಗವರ್ನರ್ ಬಿಮಲ್ ಜಲನ್ ಒಳ್ಳೆಯ ಅರ್ಥ ಸಚಿವರಾಗಲಿದ್ದಾರೆ ಎಂದು ಹೇಳಿದ್ದಾರೆ. 

ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಗೆಲುವು ಘೋಷಿಸಿದ ಶಾಸಕ

ದಿಲ್ಲಿಯಲ್ಲಿ ಮೇ 12 ರಂದು 6ನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 23 ಫಲಿತಾಂಶ ಪ್ರಕಟವಾಗಲಿದೆ.