ಲೋಕಸಭಾ ಮಹಾ ಸಮರ ಆರಂಭವಾಗಿದೆ. ಇದೇ ವೇಳೆ ಅಭ್ಯರ್ಥಿ ಸಾಕಷ್ಟು ಪ್ರಚಾರ ನಡೆಸುತ್ತಿದ್ದು, ನಾಯಕರು ಕೈ ಜೋಡಿಸುತ್ತಿದ್ದಾರೆ. ಹುಬ್ಬಳ್ಳಿಗೆ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಶಾ ಹೋಟೆಲ್ ನಲ್ಲಿಯೇ ಮೊಬೈಲ್ ಮರೆತು ತೆರಳಿದ್ದ ಘಟನೆ ನಡೆಯಿತು. 

ಹುಬ್ಬಳ್ಳಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ಮೊಬೈಲ್‌ನ್ನು ಹೋಟೆಲ್‌ನಲ್ಲೇ ಬಿಟ್ಟು ಏರ್ ಪೋರ್ಟ್ ವರೆಗೆ ತೆರಳಿದ ಘಟನೆ ನಗರದಲ್ಲಿ ನಡೆದಿದೆ. 

ಶಾ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಬೆಳಗ್ಗೆ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿ ದಾವಣ ಗೆರೆಗೆ ತೆರಳಲು ಏರ್‌ಪೋರ್ಟ್‌ಗೆ ಹೋಗಿದ್ದರು. 

ವಿಮಾನ ನಿಲ್ದಾಣಕ್ಕೆ ಹೋದ ಬಳಿಕ ರೂಮಿನಲ್ಲಿ ಮೊಬೈಲ್ ಬಿಟ್ಟು ಬಂದಿರುವುದು ಶಾಗೆ ಗೊತ್ತಾಗಿದೆ. ಕೂಡಲೇ ಹೋಟೆಲ್‌ಗೆ ಕರೆ ಮಾಡಿ ಮೊಬೈಲ್ ತರಿಸಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.