ಮುಂಬೈ[ಮಾ.13]: ಡಾ| ಬಿ.ಆರ್. ಅಂಬೇಡ್ಕರರ ಮೊಮ್ಮಗ, ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಅವರು ತಮ್ಮ ರಾಜಕೀಯ ರಂಗ ‘ವಂಚಿತ ಬಹುಜನ ಅಘಾಡಿ’ ಎಲ್ಲ 48 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಿದೆ. ಅಂಬೇಡ್ಕರ್ ಅವರ ಈ ತೀರ್ಮಾನದಿಂದ ಎನ್‌ಸಿಪಿ+ಕಾಂಗ್ರೆಸ್ ಮೈತ್ರಿಕೂಟಕ್ಕೆ ಹಿನ್ನಡೆ ಉಂಟು ಮಾಡಿದೆ.

ಅಕೋಲಾ ಜಿಲ್ಲೆಯಲ್ಲಿ ಈ ಘೋಷಣೆ ಮಾಡಿದ ಅಂಬೇಡ್ಕರ್, ‘ಕಾಂಗ್ರೆಸ್ ನೇತೃತ್ವದ ಬಿಜೆಪಿ ವಿರೋಧಿ ರಂಗ ಸೇರುವ ಬಗ್ಗೆ ಇನ್ನು ಯಾವುದೇ ಮಾತುಕತೆ ನಡೆಸುವುದಿಲ್ಲ. ಈ ಮುನ್ನ ನಡೆಸಿದ ಮಾತುಕತೆಗಳೆಲ್ಲ ವಿಫಲವಾಗಿವೆ’ ಎಂದರು.

‘ನಾವು ಈಗಾಗಲೇ 22 ಕ್ಷೇತ್ರಗಳ ಅಭ್ಯರ್ಥಿ ಘೋಷಿಸಿದ್ದೇವೆ. ಉಳಿದ ಹೆಸರುಗಳನ್ನು ಶೀಘ್ರ ಘೋಷಿಸಲಿದ್ದೇವೆ. ಎಲ್ಲ 48 ಕ್ಷೇತ್ರಗಳಿಗೆ ನಾವು ಸ್ಪರ್ಧಿಸುತ್ತೇವೆ’ ಎಂದರು.