ಚೌಕೀದಾರ್ ಚೋರ್ ಹೈ ಘೋಷಣೆ ಕೂಗಾಟ, ಜಾಧವ್ ಮಾಡಿದ್ದೇನು ಗೊತ್ತಾ..?

 ಕಾಂಗ್ರೆಸ್ ಅಭ್ಯರ್ಥಿಗಳ ಮುಂದೆ ಬಿಜೆಪಿ ಅಭಿಮಾನಿಗಳು ಮೋದಿ..ಮೋದಿ ಜೈಕಾರ ಹಾಕ್ತಾರೆ. ಅದೇ ಬಿಜೆಪಿ ಅಭ್ಯರ್ಥಿ ಮುಂದೆ ಚೌಕೀದಾರ್ ಚೋರ್ ಹೈ  ಅಮತ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗುವುದು ಮಾಮೂಲಿಯಾಗ್ಬಿಟ್ಟಿದೆ. ಇದೀಗ ಕಲಬುರಗಿಯಲ್ಲಿ ಇಂತಹದ್ದೆ ಒಮದು ಘಟನೆ ನಡೆದಿದೆ.

Ambedkar followers raise chowkidar chor hai slogans in front  kalaburagi BJP Candidate

ಕಲಬುರಗಿ, [ಏ.14]: ಕಲಬುರಗಿ ಲೋಕಸಭೆ ಬಿಜೆಪಿ ಹುರಿಯಾಳು ಡಾ. ಉಮೇಶ ಜಾಧವ್ ಅವರ ಮುಂದೆ ಅಂಬೇಡ್ಕರ್ ಅಭಿಮಾನಿಗಳು ಚೌಕೀದಾರ್ ಚೋರ್ ಹೈ ಎಂದು ಘೋಷಣೆ ಕೂಗಿರುವ ಪ್ರಸಂಗ ನಡೆದಿದೆ.

 ಡಾ. ಉಮೇಶ ಜಾಧವ್ ಅವರು ಜಗತ್ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲೆ ಹಾಕಿ ನಮಿಸಲು ಹೋದ ಸಂದರ್ಭದಲ್ಲಿ ಅಲ್ಲಿದ್ದ ನೂರಾರು ಅಂಬೇಡ್ಕರ್ ಅಭಿಮಾನಿ ಯುವಕರು ಏಕಾಏಕಿ ಚೌಕೀದಾರ್ ಚೋರ್ ಹೈ... ಎಂದು ಘೋಷಣೆ ಕೂಗಿದರು.

ಬಿಜೆಪಿ ಜಿಲ್ಲಾ ಮಟ್ಟದ ಮುಖಂಡರೊಂದಿಗೆ ಡಾ. ಜಾಧವ್ ಅಟ್ಟಣಿಗೆ ಹತ್ತಿ ಅಂಬೇಡ್ಕರ್ ಪುತ್ಥಳಿಗೆ ಮಾಲೆ ಹಾಕಿ ನಮಿಸುತ್ತಿದ್ದಂತೆಯೇ ಅಲ್ಲಲ್ಲಿ ಗುಂಪಾಗಿದ್ದ ಯುವಕರೆಲ್ಲರು ಜಮಾಯಿಸಿ ಘೋಷಣೆ ಕೂಗಲಾರಂಭಿಸಿದರು. ಪುತ್ಥಳಿಗೆ ಮಾಲೆ ಹಾಕಿ ಬರುವವರೆಗೂ ಇವರ ಘೋಷಣೆ ಕೂಗೋದು ಹಾಗೇ ಸಾಗಿತ್ತು.

ಇದನ್ನು ಕಂಡ ಡಾ. ಜಾಧವ್ ಯಾವುದಕ್ಕೂ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗದೆ ಘೋಷಣೆ ಕೂಗುತ್ತಿದ್ದ ಗುಂಪಿನತ್ತ ಕೈಮುಗಿದು ನಮಸ್ಕರಿಸುತ್ತ ಅಟ್ಟಣಿಗೆ ಇಳಿದು ಅಲ್ಲಿಂದ ಹೊರಟು ಹೋದರು. ಬಿಜೆಪಿ ಮುಖಂಡ ಅಂಬಾರಾಯ ಅಷ್ಟಗಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.

Latest Videos
Follow Us:
Download App:
  • android
  • ios