ನವದೆಹಲಿ(ಏ.10): ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೇ ದೇಶದ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ.

ಗುಜರಾತ್ ನಲ್ಲಿ  ಬಿಜೆಪಿ ಮತ್ತು ಪ್ರಧಾನಿ ಮೋದಿಗೆ ತಲೆನೋವಾಗಿದ್ದ ಹಿಂದುಳಿದ ವರ್ಗಗಳ ಯುವ ನೇತಾರ ಅಲ್ಪೇಶ್ ಠಾಕೂರ್ ಕಾಂಗ್ರೆಸ್ ಸೇರಿದ ಒಂದು ವರ್ಷದಲ್ಲೇ ಪಕ್ಷ ತೊರೆದಿದ್ದಾರೆ.

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮುನ್ನಾದಿನ ಅಲ್ಪೇಶ್ ಠಾಕೂರ್ ಕಾಂಗ್ರೆಸ್ ತೊರೆದಿದ್ದು, ತನಗೆ ಲಾಭವಾಗುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ.  

ಕೋಲಿ ಠಾಕೂರ್ ಸಮುದಾಯಕ್ಕೆ ಸೇರಿದ ಅಲ್ಪೇಶ್ ಠಾಕೂರ್ 2017ರ ಅಕ್ಟೋಬರ್ ನಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು.  ಅಲ್ಪೇಶ್ ಠಾಕೂರ್ 2011ರಲ್ಲಿ ಗುಜರಾತ್ ಕ್ಷತ್ರಿಯ ಠಾಕೂರ್ ಸೇನಾ ಎಂಬ ಸಂಘಟನೆ ಕಟ್ಟಿದ್ದರು.