ಬೆಂಗಳೂರು[ಏ. 19]  ಮಂಡ್ಯ ರಣಾಂಗಣದ ಮತದಾನ ಮುಗಿದಿದೆ. ಆದರೆ ವೋಟಿಂಗ್ ಓವರ್ ಆಗ್ತಾ ಇದ್ದಹಾಗೆ ನಿಖಿಲ್ ಕುಮಾರಸ್ವಾಮಿ ದುಬೈಗೆ ಹಾರಲಿದ್ದಾರೆ! ಅಚ್ಚರಿ ಆಗ್ತಾ ಇದೆಯಾ? ನಿಖಿಲ್ ಕುಮಾರಸ್ವಾಮಿ ಹೆಸರಿನಲ್ಲಿ ಬೆಂಗಳೂರು ಟು ದುಬೈಗೆ ಬುಕ್ ಆಗಿರುವ ವಿಮಾನ ಟಿಕೆಟ್ ಒಂದು ಸೊಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಫಲಿತಾಂಶಕ್ಕೂ ಮುನ್ನವೇ ನಿಖಿಲ್ ಕೆ. ಸಂಸದರು, ಮಂಡ್ಯ!

ಫೇಸ್ ಬುಕ್, ವಾಟ್ಸಪ್ ಸೇರಿದಂತೆ ವಿವಿಧ ಕಡೆ ಈ ಪೋಟೋ ಹರಿದಾಡುತ್ತಿದೆ. ಮಂಡ್ಯಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಏಪ್ರಿಲ್ 18 ರಂದು ಮತದಾನವಾಗಿದ್ದು ಲೋಕಸಭಾ ಚುನಾವಣೆ ವಿಚಾರದಲ್ಲಿ ದಾಖಲೆಯ ಅಂದರೆ ಶೇ. 80 ಮತದಾನವಾಗಿತ್ತು.

ಅಲ್ಲದೇ ಇಂಡಿಯನ್ ಏರ್ ಲೈನ್ಸ್ ಎನ್ನುವ  ವಿಮಾನಯಾನ ಸಂಸ್ಥೆಯೂ ಇಲ್ಲ. ಏರ್  ಇಂಡಿಯಾ ಸೇವೆ ನೀಡುತ್ತಿದೆ. ಒಟ್ಟಿನಲ್ಲಿ ಹರಿದಾಡುತ್ತಿರುವ ಪೋಟೋ ದೊಡ್ಡ ಪ್ರಮಾಣದಲ್ಲಿ ವೈರಲ್ ಆಗುತ್ತಿದೆ.

 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.