ಚನ್ನೈ[ಮಾ.11]: ಲೋಕಸಭಾ ಚುನಾವಣೆಗೆ ದಿನಾಂಕ ಫಿಕ್ಸ್ ಆಗಿದ್ದು, ಇದರ ಬೆನ್ನಲ್ಲೇ ಬಹುತೇಕ ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿಸಿಕೊಂಡಿವೆ. ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ಫೋಟೋ ಒಂದು ಹರಿದಾಡುತ್ತಿದ್ದು, ಯವುದೋ ಉದ್ಯೋಗಕ್ಕಾಗಿ ನಡೆಯುತ್ತಿರುವ ಸಂದರ್ಶನವೇನೋ ಎಂಬಂತೆ ಕಂಡು ಬರುತ್ತಿದೆ. ಆದರೆ ವಾಸ್ತವತೆ ಹೀಗಿಲ್ಲ.

ತಮಿಳುನಾಡಿನ ಸಿಎಂ ಕೆ. ಪನ್ನೀರ್ ಸೆಲ್ವಂ, ಉಪ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಸೇರಿದಂತೆ AIADMK ಪಕ್ಷದ ಹಿರಿಯ ನಾಯಕರು ಟಿಕೆಟ್ ಆಕಾಂಕ್ಷಿಗಳ ಸಂದರ್ಶನ ನಡೆಸುತ್ತಿರುವ ಫೋಟೋ ಇದಾಗಿದೆ. ಇಲ್ಲಿ ಸಾಲಿನಲ್ಲಿ ನಿಂತಿರುವ ನಾಯಕರು ತಮ್ಮ ಸರತಿಗಾಗಿ ಕಾಯುತ್ತಿರುವುದನ್ನು ನೋಡಬಹುದಾಗಿದೆ. 

ತಮಿಳುನಾಡಿನಲ್ಲಿ ಏಪ್ರಿಲ್ 18 ರಂದು ಲೋಕಸಭಾ ಚುನಾವಣೆಯೊಂದಿಗೆ ರಾಜ್ಯದ 18 ವಿಧಾನಸಭಾ ಕ್ಷೇತ್ರಗಳಿಗಹೂ ಉಪ ಚುನಾವಣೆ ನಡೆಯಲಿದೆ. ಆದರೆ ಮದ್ರಾಸ್ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುವುದಿಲ್ಲ. 

ತಮಿಳುನಾಡಿನ ಆಡಳಿತ ಪಕ್ಷ ಎಐಎಡಿಎಂಕೆಯು ಈಗಾಗಲೇ ಸಿನಿಮಾ ನಟ ಹಾಗೂ ರಾಜಕಾರಣಿ ವಿಜಯ್ ಕಾಂತ್ ರವರ ಪಕ್ಷ ಡಿಎಂಡಿಕೆಯೊಂದಿಗೆ ಚುನಾವಣಾ ಒಪ್ಪಂದವನ್ನು ಫೈನಲ್ ಮಾಡಿಕೊಂಡಿದೆ. ಇದರ ಅನ್ವಯ ತಮಿಳುನಾಡಿನಲ್ಲಿ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಅವಕಾಶ ಮಾಡಿಕೊಟ್ಟಿದೆ. ಉಭಯ ಪಕ್ಷಗಳ ನಾಯಕರ ನೇತೃತ್ವದಲ್ಲಿ ನಡೆದ ಈ ಒಪ್ಪಂದಕ್ಕೆ ಈಗಾಗಲೇ ಸಹಿಯೂ ಹಾಕಲಾಗಿದೆ.

ಈ ಮೈತ್ರಿಯ ಕುರಿತಾಗಿ ಭಾವನಾತ್ಮಕವಾಗಿ ಮಾತನಾಡಿರುವ ಎಐಎಡಿಎಂಕೆ ಪಕ್ಷದ ಸಂಯೋಜಕ ಪನ್ನೀರ್ ಸೆಲ್ವಂ 'ಇದೊಂದು ಬದ್ಧತೆಯುಳ್ಳ ಮೈತ್ರಿ ಎಂದಿದ್ದಾರೆ'