ಮತದಾರರು ಮಾಡಬಾರದ ವಿಷಯಗಳು ತಿಳಿಬೇಕಾ?

ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಏ. 18 (ಗುರುವಾರ), ಇನ್ನುಳಿದ 14 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಏ. 23 (ಮಂಗಳವಾರ) ಮತದಾನ; ಮತದಾರರಿಗೆ  ಚುನಾವಣಾ ಆಯೋದಿಂದ ವೋಟರ್ ಗೈಡ್

Ahead of Loksabha Polls Election Commission Brings Out Voters Guide

ಬೆಂಗಳೂರು: ದೇಶದಲ್ಲಿ ಪ್ರಜಾತಂತ್ರದ ಹಬ್ಬ ಆರಂಭವಾಗಿದೆ. ಸಂಸತ್ತಿನಲ್ಲಿ ನಮ್ಮನ್ನು ಸಮರ್ಥವಾಗಿ ಪ್ರತಿನಿಧಿಸುವವರನ್ನು ಆರಿಸಿ ಕಳುಹಿಸುವ ಜವಾಬ್ದಾರಿ ನಮ್ಮ ಮೇಲಿದೆ.ಈ ಜವಾಬ್ದಾರಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಜೊತೆ ಈ ಅವಧಿಯಲ್ಲಿ ನಾವು ಮಾಡಬೇಕಾದ, ಮಾಡಬಾರದ ಕೆಲಸಗಳು ಏನು ಎಂಬುವುದರ ಅರಿವು ಕೂಡಾ ಅಷ್ಟೇ ಅಗತ್ಯ.

ಮತದಾರರಿಗೆ ಈ ಎಲ್ಲಾ ವಿಷಯಗಳ ಬಗ್ಗೆ ವಿವರವಾಗಿ ತಿಳಿಯುವಂತಾಗಲು  ಚುನಾವಣಾ ಆಯೋಗವು ವೋಟರ್ ಗೈಡನ್ನು ಹೊರ ತಂದಿದೆ. ಈ ಚುನಾವಣೆಯಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ವೋಟರ್ ಗೈಡನ್ನು ನೀಡಲಾಗುವುದು, ಎಂದು ಚುನಾವಣಾ ಆಯೋಗವು ಹೇಳಿದೆ.

ಇದರಲ್ಲಿ ಚುನಾವಣೆಯ ದಿನಾಂಕ ಮತ್ತು ಸಮಯ, ಮತಗಟ್ಟೆ ಅಧಿಕಾರಿಗಳ ಸಂಪರ್ಕ ಮಾಹಿತಿ, ಪ್ರಮುಖ ವೈಬ್ ಸೈಟ್‍ಗಳು, ಸಹಾಯವಾಣಿ ಸಂಖ್ಯೆಗಳು, ಮತಗಟ್ಟೆಯಲ್ಲಿ ಗುರುತಿಸಲು ಬೇಕಾದ ದಾಖಲೆಗಳು ಮತ್ತು ಮತಗಟ್ಟೆಯಲ್ಲಿ ಮತದಾರರು ಮಾಡಬೇಕಾದ ಹಾಗೂ ಮಾಡಬಾರದ ವಿಷಯಗಳು ಸೇರಿದಂತೆ ಪ್ರಮುಖ ಮಾಹಿತಿಯನ್ನು ಹೊಂದಿರುತ್ತದೆ. ಮತಗಟ್ಟೆ ಅಧಿಕಾರಿಗಳು ಫೋಟೋ ವೋಟರ್ ಸ್ಲಿಪ್‍ಗಳ ಜೊತೆಯಲ್ಲಿ ಈ ವೋಟರ್ ಗೈಡ್ ಪುಸ್ತಕಗಳನ್ನು ವಿತರಿಸುವರು. 

ಲೋಕಸಮರದ ಲೇಟೆಸ್ಟ್ ಅಪ್ಡೇಟ್ಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ

17ನೇ ಲೋಕಸಭಾ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ.  ದೇಶದಲ್ಲಿ ಏ.11 ರಿಂದ ಆರಂಭವಾಗಿ ಮೇ 19ರವರೆಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ. 

ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಏ. 18 (ಗುರುವಾರ), ಇನ್ನುಳಿದ 14 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಏ. 23 (ಮಂಗಳವಾರ)  ಮತದಾನ ನಡೆಯಲಿದೆ.

Latest Videos
Follow Us:
Download App:
  • android
  • ios