ಬೆಳಗಾವಿ :  ರಾಜ್ಯದಲ್ಲಿ ಲೋಕಸಭಾ ಚುನಾವಣೆ ಬಳಿಕ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ. 

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಲ್ಲೋಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು ಮೇ 23 ಫಲಿತಾಂಶವು ರಾಜಕೀಯ ಧೃವೀಕರಣ ಮಾಡಲಿದೆ.  ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ಬರುವುದು ಖಚಿತವಾಗಿದ್ದು, ಬದಲಾವಣೆಯೊಂದು ಆಗಲಿದೆ. ಯಾವ ರೀತಿ ರಾಜಕೀಯ ಬದಲಾವಣೆ ಸಸ್ಪೆನ್ಸ ಆಗಿರಲಿದೆ ಎಂದರು. 

ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ಅವರು ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಡಲಿಲ್ಲ.

ಇನ್ನು ಸುರೇಶ ಗೆಲ್ಲುವುದಿಲ್ಲ. ಬೆಳಗಾವಿಯಲ್ಲಿ ಮೋದಿ ಅಲೆ ಇಲ್ಲಾ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು ಮತ್ತ ಇಲ್ಲಿ ಸುರೇಶ್ ಅಂಗಡಿ ಸಂಸದರಾಗಿಯೇ ಆಗುತ್ತಾರೆ. ಅಂಗಡಿ ಅವರ ಕುಂಡಲಿ ಹೆಚ್ಚು ಸ್ಟ್ರಾಂಗ್ ಆಗಿದೆ. ಗೋಕಾಕ ಮತ್ತು ಅರಭಾವಿಯಲ್ಲಿ ಬಿಜೆಪಿ ಹೆಚ್ಚಿನ ಲೀಡ್ ಸಿಗಲಿದೆ ಎಂದರು.