ನವದೆಹಲಿ[ಮೇ.20]: ಲೋಕಸಭಾ ಚುನಾವಣಾ ಸಮರ ಭಾನುವಾರ ನಡೆದ ಅಂತಿಮ ಹಂತದ ಮತದಾನದೊಂದಿಗೆ ಮುಕ್ತಾಯಗೊಂಡಿದೆ. ಇದರೊಂದಿಗೆ ಚುನಾವಣಾ ನೀತಿ ಸಂಹಿತೆಗೂ ಪೂರ್ಣ ವಿರಾಮ ಬಿದ್ದಿದ್ದು, ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿವೆ. ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು NDAಗೆ 300ಕ್ಕೂ ಅಧಿಕ ಸ್ಥಾನಗಳು ಸಿಗಲಿವೆ ಎಂಬ ಭವಿಷ್ಯ ನುಡಿದಿವೆ. ಇದೀಗ ಮೋದಿ ಮತ್ತೊಮ್ಮೆ ಎಂಬುವುದು ಸಮೀಕ್ಷೆಯಲ್ಲಿ ಬಹಿರಂಗವಾದ ಬೆನ್ನಲ್ಲೇ ಲೇಖಕ ಚೇತಬ್ ಭಗತ್ ಟ್ವೀಟ್ ಒಂದನ್ನು ಮಾಡುತ್ತಾ ಮೋದಿ ವಿರೋಧಿಗಳಿಗೊಂದು ಪ್ರಶ್ನೆ ಎಸೆದಿದ್ದಾರೆ.

ಟ್ವೀಟ್ ನಲ್ಲಿ ಪೋಲಿಂಗ್ ನಡೆಸಿರುವ ಚೇತನ್ ಭಗತ್ 'ಚುನಾವಣಾ ಫಲಿತಾಂಶ ಬಂದಾಗ ಮೋದಿ ವಿರೋಧಿಗಳು/ಪ್ರತಿಪಕ್ಷಗಳು ಯಾರನ್ನು ದೂಷಿಸುತ್ತಾರೆ?' ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಲು *ಇವಿಎಂ, *ಅಜ್ಞಾನಿ ಮತದಾರರು, *ತಮ್ಮನ್ನು ತಾವು, *ಮೇಲಿನ ಎಲ್ಲಾ ಆಯ್ಕೆಗಳು ಎಂಬ ನಾಲ್ಕು ಆಪ್ಶನ್ ನೀಡಿದ್ದಾರೆ. ಸದ್ಯ ಈ ಟ್ವಿಟ್ ಭಾರೀ ವೈರಲ್ ಆಗಿದೆ.

ಸಮೀಕ್ಷೆಗೆ ಸಂಬಂಧಿಸಿದಂತೆ ಕುಮಾರ್ ವಿಶ್ವಾಸ್ ಕೂಡಾ ಟ್ವೀಟ್ ಒಂದನ್ನು ಮಾಡಿದ್ದಾರೆ. ಈ ಮೂಲಕ ಪ್ರತಿಪಕ್ಷಗಳ ಕಾಲೆಳೆದಿದ್ದರೆ. ಟ್ವೀಟ್ ನಲ್ಲಿ 'ಈ ಚುನಾವಣಾ ಅಮೀಕ್ಷೆ ನಡೆಸುವವರು ಕೂಡಾ ಬಹಳ ತುಂಟರು. ಕನಿಷ್ಟ ಪಕ್ಷ ಮೇ 23ವರೆಗಾದರೂ ನೆಮ್ಮದಿಯಿಂದ ನಿದ್ರೆ ಮಾಡಲು ಬಿಡಬಹುದಿತ್ತಲ್ವಾ?' ಎಂದು ವ್ಯಂಗ್ಯವಾಡಿದ್ದಾರೆ. 

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.