ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಬ್ಲ್ಯಾಕ್ ಮೇಲ್‌ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ತೀಕ್ಷ್ಣವಾಗಿಯೇ ತಿರುಗೇಟು ನೀಡಿದ್ದಾರೆ.
ಮಂಡ್ಯ, (ಮಾ.20): ಮಂಡ್ಯ ರಣಾಂಗಣ ರಂಗೇರಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಅವರ ಬ್ಲ್ಯಾಕ್ ಮೇಲ್ ಹೇಳಿಕೆಗೆ ಇಂದು ದರ್ಶನ್ ಹಾಗೂ ಯಶ್ ಸೂಕ್ಷ್ಮವಾಗಿಯೇ ತಿರುಗೇಟು ನೀಡಿದ್ದಾರೆ.
ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಯಶ್, ‘ಇಂದು ಬೆಳಗ್ಗೆ ನಾಮಪತ್ರ ಸಲ್ಲಿಸಲು ತಯಾರಿ ನಡೆಸುತ್ತಿದ್ದ ಸುಮಕ್ಕನ ಕಣ್ಣಲ್ಲಿ ನೀರು ಇತ್ತು, ಕೇಳಿದಾಗ ನನ್ನಿಂದ ನಿಮಗಾಗಿ ತೊಂದರೆ ಆಗುತ್ತೆ. ಅವರ್ಯಾರೋ ನಿಮ್ಮ ಮನೆ ಮೇಲೆ ಐಟಿ ದಾಳಿ ಮಾಡುಸ್ತೀವಿ ಅಂತ ಹೇಳ್ತಾರೆ ಎಂದು ಅತ್ತುಬಿಟ್ಟರು.
ಅದಕ್ಕೆ ನಾನು ಈಗ ಉತ್ತರ ಕೊಡುತ್ತಿದ್ದೇನೆ.. ನಾವು ಸುಮಲತಾ ಅಕ್ಕಗೆ ಬೆಂಬಲ ಕೊಟ್ಟು, ಅವರ ಪರ ನಿಂತಿರುವುದನ್ನು ತಪ್ಪು ಅಂತ ಅಂದ್ಕೊಂಡಿಲ್ಲ, ಒಂದು ವೇಳೆ ಇದು ತಪ್ಪೇ ಆಂದ್ರೆ ನಾವು ಸಾಯೋವರೆಗೂ ನಾವು ಈ ತಪ್ಪನ್ನು ಮಾಡೇ ಮಾಡ್ತೀವಿ.
ಇದು ಈ ಲೋಕಸಭಾ ಚುನಾವಣೆಗೆ ನಿಲ್ಲೋಲ್ಲ. ಜೀವನಪೂರ್ತಿ ನಮ್ಮ ಬೆಂಬಲ ನಿಮಗೆ ಇರುತ್ತದೆ ಎಂದು ರಾಕಿಂಗ್ ಸ್ಟಾರ್ ಯಶ್, ಸುಮಲತಾ ಅಂಬರೀಶ್ಗೆ ಅಭಯ ನೀಡಿದರು.
ನಾವೇನೂ ಪಾಕಿಸ್ತಾನದಿಂದ ಬಂದವರಲ್ಲ. ನಾವು ಸಿನಿಮಾದವ್ರು ಅಂತಾ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರಂತೆ. ನಾವೂ ಮಂಡ್ಯದ ಕಾಲುವೆ ನೀರು ಕುಡಿದು ಬೆಳದುಬಂದವರು.
ಮಂಡ್ಯದ ಮಣ್ಣು ನಮಗೂ ಮೆತ್ತಿಕೊಂಡಿದೆ. ನಾವು ಮಂಡ್ಯದ ಜೊತೆ ನಂಟನ್ನು ಹೊಂದಿದ್ದೇವೆ. ಪಾಲಳ್ಳಿ ಕೆರೆಯಲ್ಲಿ ಈಜಿದ್ದೇವೆ, ಮಂಡ್ಯ ಆಲೆ ಮನೆಯಲ್ಲಿ ಬೆಲ್ಲ ತಿಂದು ಬೆಳೆದಿದ್ದೇನೆ. ಇಡೀ ಕರ್ನಾಟಕಕ್ಕೆ ನಮ್ಮ ಋಣ ಇದೆ. ಮಂಡ್ಯಕ್ಕೆ ಸ್ವಲ್ಪ ಜಾಸ್ತಿಯಿದೆ ಎಂದು ಪರೋಕ್ಷವಾಗಿ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡಗೆ ತಿರುಗೇಟು ನಿಡಿದರು.
‘ಮೈಯಲ್ಲಿರೋ ರಕ್ತದಲ್ಲಿ ನಿಮ್ಮ ಕಾಲು ತೊಳೆದ್ರೂ ಕಮ್ಮಿನೆ, ನಾವು ಕಾಸು ಕೊಟ್ಟು ಜನರನ್ನ ತಂದಿಲ್ಲ’: ದರ್ಶನ್
"
ಶಾಸಕ ನಾರಾಯಣಗೌಡ ಹೇಳಿದ್ದೇನು..?
ಮಂಡ್ಯಕ್ಕೆ ಸಿನಿಮಾ ರಂಗದವವರ ಕೊಡುಗೆ ಏನು. ಸುಮಲತಾ ಪರ ಪ್ರಚಾರ ಮಾಡಿದ್ರೆ ಸರಿ ಇರಲ್ಲ. ನಿಮ್ಮ-ನಿಮ್ಮ ಕೆಲಸ ನೋಡಿಕೊಂಡು ಮನೆಯಲ್ಲೇ ಇರಿ ಎಂದು ಪರೋಕ್ಷವಾಗಿ ಯಶ್ ಮತ್ತು ದರ್ಶನ್‌ಗೆ ಧಮ್ಕಿ ಹಾಕಿದ್ದರು.
ಅಷ್ಟೇ ಅಲ್ಲದೇ ನಮ್ ಸರ್ಕಾರ ಇದೆ. ನಿಮ್ಮ ಆಸ್ತಿ ಬಗ್ಗೆ ಶುರುವಾಗುತ್ತೆ ಎನ್ನುವ ಬ್ಲ್ಯಾಕ್ ಮೇಲ್ ಮಾತುಗಳನ್ನಾಡಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 20, 2019, 7:54 PM IST