ನವದೆಹಲಿ(ಮೇ.10): 6ನೇ ಹಂತದ ಲೋಕಸಭೆ ಚುನಾವಣೆಗಾಘಿ ರಾಷ್ಟ್ರ ರಾಜಧಾನಇ ನವದೆಹಲಿ ಸಜ್ಜಾಗಿದೆ. ಈ ಮಧ್ಯೆ ರಾಜಕೀಯ ಪಕ್ಷಗಳ ನಡುವಿನ ಆರೋಪ-ಪ್ರತ್ಯಾರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ.

ಪೂರ್ವ ದೆಹಲಿಯ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಚುನಾವಣಾ ಪ್ರಚಾರಕ್ಕಾಗಿ ತಮ್ಮ ಡುಪ್ಲಿಕೇಟ್(ತದ್ರೂಪಿ) ವ್ಯಕ್ತಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆಪ್ ಗಂಭೀರ ಆರೋಪ ಮಾಡಿದೆ.

ಗಂಭೀರ್ ತದ್ರೂಪಿ ಎಂದು ಹೇಳಲಾದ ವ್ಯಕ್ತಿಯ ಫೋಟೋ ಶೇರ್ ಮಾಡಿರುವ ಆಪ್, ಪ್ರತಿಸ್ಪರ್ಧಿ ಅತಿಶಿ ವಿರುದ್ಧ ಅವಹೇಳನಕಾರಿ ಕರಪತ್ರ ಹಂಚಿದ ಬಳಿಕ ಜನರಿಂದ ಮುಜುಗರವಾಗುವುದನ್ನು ತಪ್ಪಿಸಿಕೊಳ್ಳಲು ಗಂಭೀರ್ ತಮ್ಮ ತದ್ರೂಪಿಯನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.

ಗಂಭೀರ್ ಗೆ ದೆಹಲಿಯ ಬಿಸಿಲು ತಡೆದುಕೊಳ್ಳಲಾಗುತ್ತಿಲ್ಲ, ಇದೇ ಕಾರಣಕ್ಕೆ ಗಂಭೀರ ಎಸಿ ಕಾರಿನಲ್ಲಿ ಒಳಗಡೆ ಕುಳಿತರೆ, ಅವರ ತದ್ರೂಪಿ ಟೋಪಿ ಹಾಕಿಕೊಂಡು ಅವರ ಪರ ಬಿಸಿಲಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆಪ್ ನಾಯಕ ಅಂಕಿತ್ ಲಾಲ್ ವ್ಯಂಗ್ಯವಾಡಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ