ಪತ್ರಿಕಾಗೋಷ್ಠೀಯಲ್ಲಿ ಗಳಗಳನೆ ಅತ್ತ ಆಪ್ ಅಭ್ಯರ್ಥಿ ಅತಿಶಿ| ವಿರೋಧಿಗಳಿಂದ ಕೀಳು ಪದಗಳನ್ನು ಬಳಸಿ ಕರಪತ್ರ ಹಮಚಿದ ಆರೋಪ| ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಆಪ್ ಅಭ್ಯರ್ಥಿ ಅತಿಶಿ| ಪ್ರತಿಸ್ಪರ್ಧಿ ಬಿಜೆಪಿಯ ಗೌತಮ್ ಗಂಭೀರ್ ವಿರುದ್ಧ ಅತಿಶಿ ಆರೋಪ| ಅವಹೇಳನಕಾರಿ ಕರಪತ್ರ ಹಂಚಿ ತೇಜೋವಧೆ ಮಾಡಲಾಗಿದೆ ಎಂದ ಅತಿಶಿ| ತಮ್ಮ ವಿರುದ್ಧದ ಆರೋಪ ನಿರಾಕರಿಸಿದ ಗೌತಮ್ ಗಂಭೀರ್|

ನವದೆಹಲಿ(ಮೇ.09): ತಮ್ಮ ವಿರುದ್ಧ ಅವಹೇಳನಕಾರಿ ಮತ್ತು ಕೀಳು ಪದಗಳನ್ನು ಬಳಸಿ ಕರಪತ್ರಗಳನ್ನು ಹಂಚಲಾಗಿದೆ ಎಂದು ಆರೋಪಿಸಿ ಪೂರ್ವ ದೆಹಲಿ ಆಪ್ ಅಭ್ಯರ್ಥಿ ಅತಿಶಿ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ.

Scroll to load tweet…

ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ವಿರುದ್ಧ ಆರೋಪ ಮಾಡಿರುವ ಅತಿಶಿ, ಅತ್ಯಂತ ಕೀಳು ಮಟ್ಟದ ಪದಗಳನ್ನು ಬಳಸಿ ಕರಪತ್ರಗಳನ್ನು ಹಂಚು ಮೂಲಕ ಗಂಭೀರ್ ತಮ್ಮ ತೇಜೋವಧೆ ಮಾಡಿದ್ದಾರೆ ಎಂದು ಹರಿಹಾಯ್ದರು.

Scroll to load tweet…

ಇನ್ನು ಅತಿಶಿ ಬೆಂಬಲಕ್ಕೆ ಬಂದಿರುವ ಆಪ್ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕ್ರಿಕೆಟಿಗ ಗೌತಮ್ ಗಂಭೀರ್ ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂದು ಭಾವಿಸಿರಲಿಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನು ತಮ್ಮ ಮೇಲಿನ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿರುವ ಗಂಭೀರ್, ಚುನಾವಣೆಯಲ್ಲಿ ಸೋಲುವ ಭಯದಿಂದ ಆಪ್ ಇಂತಹ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಪ್ರತಿ ಆರೋಪ ಮಾಡಿದ್ದಾರೆ.

Scroll to load tweet…

ಗೌತಮ್ ಗಂಭೀರ್ ಎರಡು ಕ್ಷೇತ್ರಗಳ ವೋಟರ್ ಐಡಿ ಹೊಂದಿದ್ದಾರೆ ಎಂದು ಅತಿಶಿ ಇತ್ತೀಚಿಗೆ ಆರೋಪಿಸಿದ್ದರು. ಬಳಿಕ ಅತಿಶಿ ವಿರುದ್ಧ ಕೀಳು ಪದ ಬಳಸಿ ಕ್ಷೇತ್ರದಲ್ಲಿ ಕರಪತ್ರಗಳನ್ನು ಹಂಚಲಾಗಿತ್ತು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ