54ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ಪರ್ಫೆಕ್ಶನಿಸ್ಟ್| ಪತ್ನಿ ಕಿರಣ್ ಅವರೊಂದಿಗೆ ಕೇಕ್ ಕಟ್ ಮಾಡಿ ಸಂತಸ ಹಂಚಿಕೊಂಡ ಅಮೀರ್ ಖಾನ್| ಪ್ರತಿಯೊಬ್ಬರೂ ಮತದಾನ ಮಾಡುವಂತೆ ಮನವಿ ಮಾಡಿದ ಅಮೀರ್ ಖಾನ್| ಮತದಾನದ ಮೂಲಕ ರಾಜಕೀಯ ಪಕ್ಷದ ಪ್ರಚಾರ ಬೇಡ ಎಂದು ಮನವಿ| 

ಮುಂಬೈ(ಮಾ.15): ಬಾಲಿವುಡ್ ಪರ್ಫೆಕ್ಶನಿಸ್ಟ್ ಅಮೀರ್ ಖಾನ್ ನಿನ್ನೆಯಷ್ಟೇ ತಮ್ಮ 54ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಪತ್ನಿ ಕಿರಣ್ ಅವರೊಂದಿಗೆ ಕೇಕ್ ಕಟ್ ಮಾಡಿ ಅಮೀರ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅಮೀರ್, ಲೋಕಸಭೆ ಚುನಾವಣೆ ಸಮೀಪದಲ್ಲೇ ಇದ್ದು ಭಾರತದ ಪ್ರತಿಯೊಬ್ಬ ನಾಗರಿಕ ಮತದಾನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

View post on Instagram

ಕೇಕ್ ಕಟ್ ಮಾಡಿದ ಬಳಿಕ ಮಾತನಾಡಿದ ಅಮೀರ್ ಖಾನ್, ಪ್ರತಿಯೊಬ್ಬರೂ ಮತದಾನ ಮಾಡುವುದು ಅವಶ್ಯವಾಗಿದ್ದು ಆದರೆ ಯಾವುದೇ ರಾಜಕೀಯ ಪಕ್ಷದ ಕುರಿತು ಮತದಾನದ ಮೂಲಕ ಪ್ರಚಾರ ಮಾಡದಂತೆ ಮನವಿ ಮಾಡಿದ್ದಾರೆ.

ಗುಪ್ತ ಮತದಾನ ನಮ್ಮ ಹಕ್ಕಾಗಿದ್ದು, ಮತದಾನ ಮಾಡುವ ಮೂಲಕ ನಿರ್ದಿಷ್ಟ ರಾಜಕೀಯ ಪಕ್ಷದ ಪ್ರಚಾರ ಮಾಡುವುದು ಸಲ್ಲ ಎಂದು ಅಮೀರ್ ಮತದಾರರಿಗೆ ಸಲಹೆ ನೀಡಿದ್ದಾರೆ.