ನವದೆಹಲಿ[ಮಾ. 13] ಮತದಾನಕ್ಕೆ  ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಮಾಡಿಕೊಂಡಿದ್ದ ಮನವಿಗೆ ಬಾಲಿವುಡ್ ನಾಯಕರು ಸ್ಪಂದಿಸಿದ್ದಾರೆ. ಅಮಿರ್ ಖಾನ್, ಅಕ್ಷಯ್ ಕುಮಾರ್, ಕರಣ್ ಜೋಹರ್ ಸೇರಿದಂತೆ ಅನೇಕರು ಒಪ್ಪಿಗೆ ನೀಡಿದ್ದಾರೆ.

ಮಾನ್ಯ ಪ್ರಧಾನಿಯವರೆ ನಿಮ್ಮ ಮನವಿ ನಿಜಕ್ಕೂ ಇಂದಿನ ವರ್ತಮಾನದ ಅಗತ್ಯ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ಸಿಗೆ ಎಲ್ಲರ ಸಹಕಾರ ಬೇಕು ಎಂದಿದ್ದಾರೆ.

ಮೋದಿಯವರ ವಿನಂತಿಗೆ ಪ್ರತಿಕ್ರಿಯೆ ನೀಡಿರುವ ಅಕ್ಷಯ್ ಕುಮಾರ್, ಮತದಾನ ಎನ್ನುವುದು  ರಾಷ್ಟ್ರ ಮತ್ತು ರಾಷ್ಟ್ರದ ಪ್ರಜೆಗಳ ನಡುವಿನ ಸೂಪರ್ ಹಿಟ್ ಪ್ರೇಮ್ ಕತೆ ಎಂದು ಹೇಳಿದ್ದಾರೆ.