ಚುನಾವಣೆಗಳಲ್ಲಿ ಕಡಿಮೆಯಾಗುತ್ತಿರುವ ಶೇಕಡಾವಾರು ಮತದಾನ| ಶೇಕಡಾವಾರು ಮತದಾನ ಹೆಚ್ಚಿಸಲು ತಲೆ ಕೆಡಿಸಿಕೊಂಡಿರುವ ಚುನಾವಣಾ ಆಯೋಗ| ಗುಜರಾತ್ ಮತಗಟ್ಟೆಯಲ್ಲಿ ಶೇ.100 ರಷ್ಟು ಮತದಾನ| ಕೇವಲ ಒಬ್ಬ ಮತದಾರನಿಗಾಗಿ ಮತಗಟ್ಟೆ ಸ್ಥಾಪಿಸಿದ ಚುನಾವಣಾ ಆಯೋಗ| ಗುಜರಾತ್ ಗಿರ್ ಅರಣ್ಯ ಪ್ರದೇಶದಲ್ಲಿರುವ ಜುನಾಘಡ್ ಮತಗಟ್ಟೆ| ಮತದಾನ ಮಾಡಿ ಬೀಗಿದ ವೃದ್ಧ ಭರತ್ ದಾಸ್ ಬಾಪು|
ಜುನಾಘಢ್(ಏ.23): ಎಷ್ಟೇ ಜಾಗೃತಿ ಮೂಡಿಸಿದರೂ ಚುನಾವಣೆಗಳಲ್ಲಿ ಶೇಕಡಾವಾರು ಮತದಾನ ಕಡಿಮೆಯಾಗುತ್ತಿದೆ ಎಂದು ಚುನಾವಣಾ ಆಯೋಗ ತಲೆ ಕೆಡಿಸಿಕೊಳ್ಳುತ್ತಿದೆ. ಈ ಮಧ್ಯೆ ಗುಜರಾತ್ ಗಿರ್ ಅರಣ್ಯ ಪ್ರದೇಶದಲ್ಲಿರುವ ಜುನಾಘಡ್ ಮತಗಟ್ಟೆಯಲ್ಲಿ ಶೇ.100ರಷ್ಟು ಮತದಾನವಾಗಿದೆ. ಅದ್ಹೇಗೆ ಅಂತೀರಾ?.
ಜುನಾಘಡ್ ಮತಗಟ್ಟೆಯಲ್ಲಿ ಏಕೈಕ ಮತದಾರನಿದ್ದು, ಈ ತಾತನಿಗೋಸ್ಕರ ಚುನಾವಣಾ ಆಯೋಗ ಮತಗಟ್ಟೆ ಸ್ಥಾಪಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಇಲ್ಲಿನ ಭರತ್ ದಾಸ್ ಬಾಪು ಎಂಬ ವೃದ್ಧ ಇಂದು ಮತದಾನ ಮಾಡುವ ಮೂಲಕ ಒಂದು ಮತದ ಮೌಲ್ಯದ ಮನವರಿಕೆ ಮಾಡಿಕೊಟ್ಟಿದ್ದಾರೆ.
Scroll to load tweet…
ಪ್ರತಿಯೊಂದೂ ಮತವೂ ಅಮೂಲ್ಯವಾಗಿದ್ದು, ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದು ಭರತ್ ದಾಸ್ ಬಾಪು ಮತದಾರರಲ್ಲಿ ಮನವಿ ಮಾಡಿದ್ದಾರೆ.
