ಹಾಸನ[ಮಾ.28]: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯ ನಾಮಪತ್ರದಲ್ಲಿ ನೀಡುವ ಆಸ್ತಿ ವಿವರ ಪಾರದರ್ಶಕವಾಗಿರಬೇಕು. ಏನನ್ನೂ ಮುಚ್ಚಿಡಬಾರದು ಎಂಬುದು ನಿಯಮದಲ್ಲಿದೆ. ಆದರೆ, ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅನೇಕ ಸತ್ಯಾಂಶ ಮರೆ ಮಾಚಿದ್ದಾರೆ. ಹೀಗಾಗಿ ಪ್ರಜ್ವಲ್ ನಾಮಪತ್ರ ತಿರಸ್ಕಾರ ಮಾಡಬೇಕು ಎಂದು ಹಾಸನ ಲೋಕಸಭಾ ಬಿಜೆಪಿ ಅಭ್ಯರ್ಥಿ ಎ.ಮಂಜು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಬುಧವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಧಿಕಾರಿ ಅಕ್ರಂ ಪಾಷಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ 2 ಕಂಪನಿಗಳಿಗೆ ಷೇರುದಾರರಾಗಿದ್ದಾರೆ. ಎಷ್ಟು ಪ್ರಮಾಣ ಅನ್ನೋದನ್ನು ಅಫಿಡವಿಟ್‌ನಲ್ಲಿ ತೋರಿಸಿಲ್ಲ.

ಅಭ್ಯರ್ಥಿ ಯಾದವರು ಯಾವುದನ್ನೂ ಮರೆ ಮಾಚುವ ಹಾಗಿಲ್ಲ. ಹೀಗಾಗಿ ಈ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು