ಲೋಕಸಭಾ ಚುನಾವಣೆಗೆ ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಈ ವೇಳೆ ಮೊದಲ ಹಂತದಲ್ಲಿ ಮೈತ್ರಿ ಅಭ್ಯರ್ಥಿಗೆಲುವಿನ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ ಎಚ್.ಡಿ ರೇವಣ್ಣ. 

ಮಂಡ್ಯ : ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಕೆಲವೇ ದಿನ ಬಾಕಿ ಉಳಿದಿವೆ. 8 ದಿನದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿವಿಧ ಪಕ್ಷಗಳ ನಾಯಕರು ಗೆಲುವಿನ ಭರವಸೆಯಲ್ಲಿದ್ದು, ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಮಂಡ್ಯದಲ್ಲಿ ಎಚ್.ಡಿ ರೇವಣ್ಣ ಮೈತ್ರಿ ಪಕ್ಷದ ಗೆಲುವಿನ‌ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. 

ಅದೃಷ್ಟ ಸಂಖ್ಯೆ ಬಗ್ಗೆ ವ್ಯಾಖ್ಯಾನ ಕೊಟ್ಟಿರುವ ಎಚ್.ಡಿ.ರೇವಣ್ಣ ನನಗೆ 6, 8, 22 ಅದೃಷ್ಟ ಸಂಖ್ಯೆಗಳು. 18 ಅಂದರೆ 1+8=9, 9 ಬಹಳ ಅದೃಷ್ಟದ ಸಂಖ್ಯೆ. ಕಳೆದ ಬಾರಿ 2018 ಚುನಾವಣೆ ನಡೆದು ಕುಮಾರಸ್ವಾಮಿ ಮುಖ್ಯಮಂತ್ರಿ ಆದರು.

ಈ ಭಾರಿ ಕೂಡ 18 ರಂದು ಮತದಾನ ಇದೆ. ಹೀಗಾಗಿ ಮೊದಲ‌ ಹಂತದ 14 ಸ್ಥಾನ ಮೈತ್ರಿ ಅಭ್ಯರ್ಥಿಯೇ ಗೆಲ್ಲುತ್ತಾರೆ. ರಾಜ್ಯದಲ್ಲಿ ಅಚ್ಚರಿ ಫಲಿತಾಂಶ ಬರುತ್ತದೆ. 22 ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಭರವಸೆಯ ಮಾತುಗಳನ್ನಾಡಿದರು. 

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.