ಚಿಕ್ಕಮಗಳೂರು : ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಪಕ್ಷಾಂತರ ಪರ್ವ ಜೋರಾಗಿಯೇ ನಡೆಯುತ್ತಿದೆ. 

 ಚಿಕ್ಕಮಗಳೂರಿನಲ್ಲಿ ರಾತ್ರೋರಾತ್ರಿ ಮೈತ್ರಿ ಪಕ್ಷಕ್ಕೆ ಬಿಜೆಪಿ ಶಾಕ್ ಕೊಟ್ಟಿದೆ.  ರಾತ್ರಿ ಬೆಳಗಾಗುವುದರೊಳಗೆ 80ಕ್ಕೂ ಹೆಚ್ಚು ದಳಪತಿಗಳು ಬಿಜೆಪಿ ಸೇರ್ಪಡೆಯಾಗಿದ್ದಾರೆ. 

ಜೆಡಿಎಸ್ ನ ಖಾಂಡ್ಯಾ ಹೋಬಳಿಯ ಸಂದೇಶ್ ಗೌಡ ಸೇರಿದಂತೆ  ತಾಲೂಕು ಹಾಗೂ ಹೋಬಳಿ ಮಟ್ಟದ ಜೆಡಿಎಸ್ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದಾರೆ.  ಚುನಾವಣೆಗೆ ಒಂದು ಬಾಕೀ ಇರುವಾಗಲೇ ಜೆಡಿಎಸ್ ಗೆ ಬಿಗ್ ಶಾಕ್ ನೀಡಲಾಗಿದೆ. 

ಶೃಂಗೇರಿಯ ಮಾಜಿ ಶಾಸಕ ಜೀವರಾಜ್ ನೇತೃತ್ವದಲ್ಲಿ ಬೂತ್ ಮಟ್ಟದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಬಹುತೇಕ ಮಂದಿ ಬಿಜೆಪಿಗೆ ಸೇರಿದ್ದಾರೆ. 

ಬಿಜೆಪಿ ಸೇರ್ಪಡೆಯಿಂದ ಜಿಲ್ಲಾ ಜೆಡಿಎಸ್ ಮುಖಂಡರು ತೀವ್ರ  ಮುಜುಗರಕ್ಕೊಳಗಾಗಿದ್ದಾರೆ. 

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.