ಬೆಂಗಳೂರು :  ಲೋಕಸಭೆ ಚುನಾವಣೆಯ ಎರಡು ಹಂತದಲ್ಲಿ ಚುನಾವಣಾ ಕಾರ್ಯ ಕ್ಕಾಗಿ ನಿಯೋಜನೆಗೊಂಡಿರುವವರ ಪೈಕಿ 8 ಮಂದಿ ಸಾವನ್ನಪ್ಪಿದ್ದಾರೆ. 

ಈ ಪೈಕಿ ಏಳು ಮಂದಿ ಹೃದಯಾಘಾತ ದಿಂದ ಮೃತರಾದರೆ ಒಬ್ಬರು ರಸ್ತೆ ಅಪಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಎರಡನೇ ಹಂತದಲ್ಲಿ 12 ಕಡೆ ಮತದಾನ ಬಹಿಷ್ಕರಿಸಲಾಗಿತ್ತು. 

ಎಲ್ಲರನ್ನು ಮನವೊಲಿಕೆ ಮಾಡಿ ಮತದಾನ ಮಾಡಲು ಚುನಾವಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಎಲ್ಲಿಯೂ ಮರುಮತದಾನ ನಡೆಯುವುದಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದರು.