ನವದೆಹಲಿ[ಮೇ.12]: ಲೋಕಸಭೆಗೆ ನಡೆಸಲಾಗುತ್ತಿರುವ ಒಟ್ಟು 7 ಹಂತದ ಚುನಾವಣೆ ಪೈಕಿ 6ನೇ ಹಂತ ಭಾನುವಾರ ದೇಶದ 7 ರಾಜ್ಯಗಳಲ್ಲಿ ನಡೆಯಲಿದೆ. ಈ ಹಂತ ಪೂರ್ಣಗೊಂಡರೆ ಒಟ್ಟಾರೆ 543 ಕ್ಷೇತ್ರಗಳ ಪೈಕಿ 483 ಕ್ಷೇತ್ರಗಳ ಚುನಾವಣೆ ಪೂರ್ಣಗೊಂಡಂತೆ ಆಗಲಿದೆ. ಉಳಿದ 59 ಕ್ಷೇತ್ರಗಳಿಗೆ ಮೇ 19ರಂದು 7ನೇ ಮತ್ತು ಕಡೆಯ ಹಂತದಲ್ಲಿ ಚುನಾವಣೆ ನಡೆಯಲಿದೆ. ತಮಿಳುನಾಡಿನ ವೆಲ್ಲೂರು ಕ್ಷೇತ್ರದಲ್ಲಿ ಚುನಾವಣೆಯನ್ನು ಮುಂದೂಡಿರುವ ಕಾರಣ, 542 ಸ್ಥಾನಗಳಿಗೆ ಮಾತ್ರ ಸದ್ಯ ಚುನಾವಣೆ ನಡೆಯುತ್ತಿದೆ.

ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಕ್ಷೇತ್ರ?

ಉತ್ತರಪ್ರದೇಶ: 14

ಹರ್ಯಾಣ: 10

ಬಿಹಾರ: 08

ಮಧ್ಯಪ್ರದೇಶ: 08

ಪಶ್ಚಿಮ ಬಂಗಾಳ: 08

ದೆಹಲಿ: 07

ಜಾರ್ಖಂಡ್‌: 4

ಬಿಜೆಪಿಗೆ ಏಕೆ ಅಗ್ನಿಪರೀಕ್ಷೆ

ಭಾನುವಾರ ಚುನಾವಣೆ ನಡೆಯಲಿರುವ 59 ಕ್ಷೇತ್ರಗಳ ಪೈಕಿ ಕಳೆದ ಬಾರಿ 44ರಲ್ಲಿ ಬಿಜೆಪಿ ಗೆದ್ದಿತ್ತು.

ಅತಿ ಶ್ರೀಮಂತ ಅಭ್ಯರ್ಥಿ

374 ಕೋಟಿ ರು.: ಜ್ಯೋತಿರಾಧಿತ್ಯ ಸಿಂಧಿಯಾ

147 ಕೋಟಿ ರು.: ಗೌತಮ್‌ ಗಂಭೀರ್‌

102 ಕೋಟಿ ರು.: ವಿರೇಂದ್ರ ರಾಣಾ

5 ಕೋಟಿ: ಕಣದಲ್ಲಿರುವವವರ ಪೈಕಿ 109 ಜನ 5 ಕೋಟಿಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ.

ಪ್ರಮುಖ ಅಭ್ಯರ್ಥಿಗಳು

ಮನೇಕಾ ಗಾಂಧಿ, ಹರ್ಷವರ್ಧನ್‌ಸಿಂಗ್‌, ಮೀನಾಕ್ಷಿ ಲೇಖಿ, ಗೌತಮ್‌ ಗಂಭೀರ್‌, ಮನೋಜ್‌ ತಿವಾರಿ, ಶೀಲಾ ದೀಕ್ಷಿತ್‌, ಜ್ಯೋತಿರಾಧಿತ್ಯ ಸಿಂಧಿಯಾ, ವಿಜೇಂದರ್‌ಸಿಮಗ್‌, ಅಖಿಲೇಶ್‌ ಯಾದವ್‌,