ಗುವಾಹಟಿ[ಏ.24]: ಕ್ಯಾನ್ಸರ್‌ನಿಂದ ಬಳಲುತ್ತಿರುವ ಹೊರತಾಗಿಯೂ 68 ವರ್ಷದ ವೃದ್ಧರೊಬ್ಬರು ತಮ್ಮ ಮತದಾನದ ಹಕ್ಕು ಚಲಾಯಿಸುವ ಮೂಲಕ ಇತರ ಯುವ ಮತದಾರರಿಗೆ ಮಾದರಿಯಾಗಿದ್ದಾರೆ.

ತಮ್ಮ ಬಾಲ್ಯ ಸ್ನೇಹಿತ ಮುಕುತ್‌ ಚೌಧರಿ ಅವರ ಜೊತೆ ಮತಗಟ್ಟೆಗೆ ಆಗಮಿಸಿದ ಕ್ಯಾನ್ಸರ್‌ ಮಾರಿಗೆ ತುತ್ತಾಗಿರುವ ಬಶಿರ್‌ ಅಲಿ(68) ಅವರು ತಮ್ಮ ಹಕ್ಕು ಚಲಾಯಿಸಿದರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಬಶೀರ್‌ ಅಲಿ ಸ್ನೇಹಿತ ಚೌಧರಿ, ‘ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಬಶೀರ್‌ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ವೈದ್ಯರು ಹೇಳಿದ್ದರು. ಆದರೆ, ಮತದಾನ ಮಾಡಲೇಬೇಕು ಎಂದು ತನಗೆ ಬಶೀರ್‌ ಹೇಳಿದ್ದ. ಹೀಗಾಗಿ, ನಾನು ಮತ್ತು ಬಶೀರ್‌ ಆಟೋರಿಕ್ಷಾದಲ್ಲಿ ಬಂದು ಮತ ಚಲಾಯಿಸಿದ್ದೇವೆ,’ ಎಂದರು.