Asianet Suvarna News Asianet Suvarna News

ಸೆಲೆಬ್ರಿಟಿ ಸಂಸದರು 5 ವರ್ಷ ಮಾಡಿದ್ದೇನು?

ಸಿನಿಮಾ, ಕ್ರೀಡೆ ಸೇರಿದಂತೆ ಇನ್ನಿತರ ಕ್ಷೇತ್ರಗಳ ಸೆಲೆಬ್ರಿಟಿಗಳು ರಾಜಕೀಯ ಸೇರುವುದು ಸಾಮಾನ್ಯ. ಈ ಬಾರಿಯೂ ಅನೇಕ ಸೆಲೆಬ್ರಿಟಿಗಳು ಲೋಕಸಭೆಗೆ ಸ್ಪರ್ಧಿಸಿದ್ದಾರೆ. ಆದರೆ ಹೀಗೆ ತಮ್ಮ ‘ಸ್ಟಾರ್‌’ಗಿರಿಯಿಂದಲೇ ಕೆಳಮನೆಗೆ ಆಯ್ಕೆಯಾದ ಸೆಲೆಬ್ರಿಟಿ ಸಂಸದರು ಎಷ್ಟುಅಧಿವೇಶನಗಳಲ್ಲಿ ಪಾಲ್ಗೊಂಡಿದ್ದಾರೆ, ಎಷ್ಟುಚರ್ಚೆಗಳಲ್ಲಿ ಭಾಗವಹಿಸಿದ್ದಾರೆ, ತಮ್ಮ ಕ್ಷೇತ್ರವನ್ನು ಎಷ್ಟುಅಭಿವೃದ್ಧಿ ಪಡಿಸಿದ್ದಾರೆ ಎನ್ನುವುದು ಕುತೂಹಲದ ವಿಷಯ. ಈ ಹಿನ್ನೆಲೆಯಲ್ಲಿ 16ನೇ ಲೋಕಸಭೆಗೆ ಆಯ್ಕೆಯಾದ ಸೆಲೆಬ್ರಿಟಿ ಸಂಸದರ ಸಾಧನೆ ಇಲ್ಲಿದೆ.

5 years achievements of celebrity MPs
Author
Bengaluru, First Published May 19, 2019, 10:33 AM IST

ಸಿನಿಮಾ, ಕ್ರೀಡೆ ಸೇರಿದಂತೆ ಇನ್ನಿತರ ಕ್ಷೇತ್ರಗಳ ಸೆಲೆಬ್ರಿಟಿಗಳು ರಾಜಕೀಯ ಸೇರುವುದು ಸಾಮಾನ್ಯ. ಈ ಬಾರಿಯೂ ಅನೇಕ ಸೆಲೆಬ್ರಿಟಿಗಳು ಲೋಕಸಭೆಗೆ ಸ್ಪರ್ಧಿಸಿದ್ದಾರೆ. ಆದರೆ ಹೀಗೆ ತಮ್ಮ ‘ಸ್ಟಾರ್‌’ಗಿರಿಯಿಂದಲೇ ಕೆಳಮನೆಗೆ ಆಯ್ಕೆಯಾದ ಸೆಲೆಬ್ರಿಟಿ ಸಂಸದರು ಎಷ್ಟುಅಧಿವೇಶನಗಳಲ್ಲಿ ಪಾಲ್ಗೊಂಡಿದ್ದಾರೆ, ಎಷ್ಟುಚರ್ಚೆಗಳಲ್ಲಿ ಭಾಗವಹಿಸಿದ್ದಾರೆ, ತಮ್ಮ ಕ್ಷೇತ್ರವನ್ನು ಎಷ್ಟುಅಭಿವೃದ್ಧಿ ಪಡಿಸಿದ್ದಾರೆ ಎನ್ನುವುದು ಕುತೂಹಲದ ವಿಷಯ. ಈ ಹಿನ್ನೆಲೆಯಲ್ಲಿ 16ನೇ ಲೋಕಸಭೆಗೆ ಆಯ್ಕೆಯಾದ ಸೆಲೆಬ್ರಿಟಿ ಸಂಸದರ ಸಾಧನೆ ಇಲ್ಲಿದೆ.

19-16ನೇ ಲೋಕಸಭೆಯ ಸೆಲೆಬ್ರಿಟಿ ಸಂಸದರು

66%- ಸೆಲೆಬ್ರಿಟಿ ಸಂಸದರ ಸರಾಸರಿ ಹಾಜರಿ

ಸೆಲೆಬ್ರಿಟಿ ಸಂಸದರು    ಹಾಜರಿ    ಚರ್ಚೆ    ಪ್ರಶ್ನೆ    ನಿಧಿ ಬಳಕೆ

ದೀಪಕ್‌ ಅಧಿಕಾರಿ    11%    2    3    96.7%

ಹೇಮಾ ಮಾಲಿನಿ    39%    18    210    89%

ಸಂಧ್ಯಾ ರಾಯ್‌    53%    2    3    98.8%

ಅರ್ಪಿತಾ ಘೋಷ್‌    62%    24    26    89.65

ಪರೇಶ್‌ ರಾವಲ್‌    66%    7    185    85.8%

ಶತ್ರುಘ್ನ ಸಿನ್ಹಾ    67%    0    0    91.1%

ದೇವ್‌ ವರ್ಮಾ    69%    1    0    90%

ಕಿರಣ್‌ ಅನುಪಮ್‌ ಖೇರ್‌    84%    44    335    91.2%

ಜಾಜ್‌ರ್‍ ಬೇಕರ್‌    98%    33    255    80.5%

ಸಂಸತ್‌ ಕಲಾಪಕ್ಕೆ ಗೈರು

2014-2019ರಲ್ಲಿ 331 ದಿನ ಅಧಿವೇಶನ ನಡೆದಿದೆ. ಒಟ್ಟು ಎಂಪಿಗಳ ಸರಾಸರಿ ಹಾಜರಿ 80%. ಸೆಲೆಬ್ರಿಟಿ ಎಂಪಿಗಳ ಸರಾಸರಿ ಹಾಜರಿ 66%. ಇವರ ಪೈಕಿ ಅಸ್ಸಾಮಿ ಮತ್ತು ಬೆಂಗಾಲಿ ನಟ ಜಾಜ್‌ರ್‍ ಬೇಕರ್‌ ಅತಿ ಹೆಚ್ಚು ಅಧಿವೇಶನಗಳಲ್ಲಿ ಪಾಲ್ಗೊಂಡು 98% ಹಾಜರಿ ಪಡೆದಿದ್ದಾರೆ. ಟಿಎಂಸಿ ಎಂಪಿ ದೀಪಕ್‌ (ದೇವ್‌) ಅಧಿಕಾರಿ ಅತಿ ಕಡಿಮೆ ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಬಿಜೆಪಿ ಸಂಸದೆ ಹೇಮಾಮಾಲಿನಿ ಇದ್ದಾರೆ.

ಅನುದಾನ ಚೆನ್ನಾಗಿ ಬಳಕೆ

19 ಸೆಲೆಬ್ರಿಟಿ ಸಂಸದರು ಸಂಸತ್‌ ಅಧಿವೇಶಗಳಲ್ಲಿ ಪಾಲ್ಗೊಂಡಿದ್ದಕ್ಕಿಂತ ಗೈರಾಗಿದ್ದೇ ಹೆಚ್ಚು, ಚರ್ಚೆಗಳಲ್ಲಿ ಪಾಲ್ಗೊಂಡಿದ್ದೂ ಕಡಿಮೆಯೇ, ಅಲ್ಲಿ ಕೇಳಿರುವ ಪ್ರಶ್ನೆಗಳ ಸಂಖ್ಯೆಯೂ ಅಷ್ಟಕ್ಕಷ್ಟೆ. ಆದರೆ ಇವರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಇತರೆ ಎಂಪಿಗಳು ವಿನಿಯೋಗಿಸಿದ್ದಕ್ಕಿಂತ ಹೆಚ್ಚಿನ ಅನುದಾನ ಖರ್ಚು ಮಾಡಿದ್ದಾರೆ. ಲೋಕಲ್‌ ಏರಿಯಾ ಡೆವಲಪ್‌ಮೆಂಟ್‌ ಸ್ಕೀಮ್‌ನಡಿ ನೀಡಲಾದ ಅನುದಾನವನ್ನು ಬೇರೆ ಸಂಸದರಿಗಿಂತ ಇವರು ಹೆಚ್ಚು ಬಳಕೆ ಮಾಡಿದ್ದಾರೆ. ಪ್ರತಿವರ್ಷ ಎಂಪಿಲಾಡ್‌ನಡಿ ಸಂಸದರಿಗೆ 5 ಕೋಟಿ ರು. ಅನುದಾನ ನೀಡಲಾಗುತ್ತದೆ.

ಶತ್ರುಘ್ನ ಸಿನ್ಹಾ ಮಾತೇ ಆಡಿಲ್ಲ

ಸಂಸತ್‌ ಕಲಾಪಗಳಲ್ಲಿ ಸೆಲೆಬ್ರಿಟಿಗಳು ಪಾಲ್ಗೊಂಡ ಚರ್ಚೆಗಳ ಸರಾಸರಿ ಸಂಖ್ಯೆ 22. ಇವರು ಕೇಳಿದ ಸರಾಸರಿ ಪ್ರಶ್ನೆಗಳ ಸಂಖ್ಯೆ 101. ಆದರೆ, ಸದ್ಯ ಕಾಂಗ್ರೆಸ್‌ ಪಕ್ಷ ಸೇರಿರುವ ಬಿಜೆಪಿ ಎಂಪಿ ಶತ್ರುಘ್ನ ಸಿನ್ಹಾ ಯಾವ ಚರ್ಚೆಯಲ್ಲೂ ಪಾಲ್ಗೊಂಡಿಲ್ಲ, ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಆದರೆ ತಮಗೆ ನೀಡಲಾದ ಸಂಸದರ ನಿಧಿಯಲ್ಲಿ ಶೇ.91.1ರಷ್ಟುಬಳಕೆ ಮಾಡಿದ್ದಾರೆ.

2019 ರಲ್ಲಿ ಸ್ಪರ್ಧಿಸಿರುವ ಹೊಸ ಸೆಲೆಬ್ರಿಟಿಗಳು

ಸನ್ನಿ ಡಿಯೋಲ್‌

ಊರ್ಮಿಳಾ ಮಾಂತೋಂಡ್ಕರ್‌

ಪ್ರಕಾಶ್‌ ರಾಜ್‌

ಹನ್ಸ್‌ ರಾಜ್‌ ಹನ್ಸ್‌

ಗೌತಮ್‌ ಗಂಭೀರ್‌

ವಿಜೇಂದರ್‌ ಸಿಂಗ್‌

ನುಸ್ರತ್‌ ಜಹಾನ್‌

Follow Us:
Download App:
  • android
  • ios