ಕೋಲ್ಕತಾ : ಲೋಕಸಭಾ ಚುನಾವಣೆ ಪರ್ವ ದೇಶದಲ್ಲಿ ಆರಂಭವಾಗಿದೆ.  ಇದೇ ವೇಳೆ ಪಕ್ಷದ ಕಾರ್ಯಕರ್ತರು ಫುಲ್ ಆ್ಯಕ್ಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಕೋಲ್ಕತಾದ 36 ವರ್ಷದ ಬಿಜೆಪಿ ಕಾರ್ಯಕರ್ತ  ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಜಿಲ್ಲಾ ಐಟಿ ಸೆಲ್ ನಲ್ಲಿ ಕಾರ್ಯ ನಿರ್ವಹಿಸುವ ಅವರು  ಒಟ್ಟು 1114 ವಾಟ್ಸಾಪ್ ಗ್ರೂಪ್ ಗಳ ಅಡ್ಮಿನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಪಕ್ಷದ ಫೇಸ್ ಬುಕ್ ಪೇಜ್ ಹಾಗೂ ಟ್ವಿಟ್ಟರ್ ಹ್ಯಾಂಡಲ್ ಗಳನ್ನು ನಿರ್ವಹಿಸುತ್ತಾರೆ. 

ಪಕ್ಷವು ಮತದಾರರನ್ನು ತಲುಪಲು ಸಾಮಾಜಿಕ ಜಾಲತಾಣ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ನಾವು ಹೆಚ್ಚಿನ ಪ್ರದೇಶ ತಲುಪಬಹುದಾಗಿದೆ.  ನಾವು ಸ್ಥಳಕ್ಕೆ ತೆರಳಿ ಪ್ರಚಾರ ಮಾಡಲು ಸಾಧ್ಯವಾಗದಿರುವ ಕೊರತೆಯನ್ನು ಸಾಮಾಜಿಕ ಜಾಲತಾಣಗಳು ನೀಗಿಸುತ್ತವೆ. 

ಒಟ್ಟು 2 ಮೊಬೈಲ್ ಸಂಖ್ಯೆಗಳನ್ನು ಹೊಂದಿದ್ದು, ಒಂದು ಸಂಖ್ಯೆಯಲ್ಲಿ 229 ಗ್ರೂಪ್ ಗಳ ಅಡ್ಮಿನ್ ಆಗಿದ್ದು, ಇನ್ನೊಂದು ಸಂಖ್ಯೆಯಲ್ಲಿ 885 ಗ್ರೂಪ್ ಅಡ್ಮಿನ್ ಆಗಿದ್ದೇನೆ. 250ಕ್ಕೂ ಹೆಚ್ಚು ಗ್ರೂಪ್ ಗಳಲ್ಲಿ 30 ಕ್ಕೂ ಅಧಿಕ ಮಂದಿ ಇದ್ದಾರೆ. ಪ್ರತಿದಿನವೂ ಈ ಗ್ರೂಪ್ ಗಳಲ್ಲಿ ಹಲವು ಅಪ್ ಡೇಟ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 

ಕ್ಯಾಂಪೇನ್ ವೇಳೆ ಮನೆ ಮನೆಗೆ ತೆರಳಿ  ಪಕ್ಷದ ಬಗ್ಗೆ ತಿಳಿಸುತ್ತೇವೆ. ಪ್ರತೀ ಕುಟುಂಬದ ಓರ್ವ ಸ್ಮಾರ್ಟ್  ಫೋನ್ ಹೊಂದಿರುವವರ ನಂಬರ್ ತೆಗೆದುಕೊಂಡು  ಆನ್ ಲೈನ್ ಮೆಂಬರ್ ಶಿಪ್ ನೀಡಿ ಈ ಮೂಲಕ ಅಪ್ಡೇಟ್ ನೀಡುವುದಾಗಿ ಹೇಳಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.