Asianet Suvarna News Asianet Suvarna News

ಪ್ರಧಾನಿ ಹುದ್ದೆಗೆ ಮೋದಿ ಸೂಕ್ತ, ಗೃಹಿಣಿಯರ ಫೆವರೆಟ್ ರಾಹುಲ್: ಸಿವೋಟರ್ ಸಮೀಕ್ಷೆ!

2019ರಲ್ಲಿ ಭಾರತದ ಭವಿಷ್ಯ ಯಾರ ಕೈಗೆ ನೀಡುವಿರಿ? ಭಾರತದ ಮುಂದಿನ ಪ್ರಧಾನಿ ನರೇಂದ್ರ ಮೋದಿಯೋ, ರಾಹುಲ್ ಗಾಂಧಿಯೋ?| ಪ್ರಧಾನಿ ಹುದ್ದೆ ಕುರಿತು ದೇಶದ ಮತದಾರನ ಮನದಲ್ಲಿ ಏನಿದೆ? ಬಹುತೇಕ ಭಾರತೀಯರಿಗೆ ಮೋದಿಯೇ ಪ್ರಧಾನಿ ಹುದ್ದೆಗೆ ಸೂಕ್ತ| ಗೃಹಣಿಯರ ವಲಯದಲ್ಲಿ ರಾಹುಲ್ ಗಾಂಧಿ ಫೆವರಿಟ್ ಅಭ್ಯರ್ಥಿ| ಮೋದಿ- ರಾಹುಲ್ ನಡುವಿನ ಶೇಕಡಾವಾರು ಆಯ್ಕೆಯ ಸಂಪೂರ್ಣ ಚಿತ್ರಣ| ಸಿವೊಟರ್-ಐಎನ್ಎಸ್ ಪೋಲ್ ಟ್ರ್ಯಾಕರ್ ನಡೆಸಿದ ಸಮೀಕ್ಷೆ|

2019  PollI Survey By IANS-CVOTER Modi Still Most Preferred Choice For PM
Author
Bengaluru, First Published Apr 3, 2019, 2:05 PM IST

ನವದೆಹಲಿ(ಏ.03): ನರೇಂದ್ರ ಮೋದಿ ಅವರೇ ಭಾರತದ ಪ್ರಧಾನಮಂತ್ರಿ ಹುದ್ದೆಗೆ ಸೂಕ್ತ ವ್ಯಕ್ತಿ ಎಂಬುದು ಬಹುತೇಕ ಭಾರತೀಯರ ಅಭಿಪ್ರಾಯವಾಗಿದೆ. ಆದರೆ ಗೃಹಿಣಿಯರ ವಲಯದಲ್ಲಿ ಮೋದಿ ಅವರಿಗೆ ರಾಹುಲ್ ಗಾಂಧಿ ಟಕ್ಕರ್ ಕೊಟ್ಟಿದ್ದು, ಗೃಹಿಣಿಯರ ಫೆವರೆಟ್ ಆಗಿ ರಾಹುಲ್ ಹೊರ ಹೊಮ್ಮಿದ್ದಾರೆ.

ಸಿವೊಟರ್-ಐಎನ್ಎಸ್ ಪೋಲ್ ಟ್ರ್ಯಾಕರ್  ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ 2019ರ ಬಳಿಕ ಯಾರು ಈ ದೇಶವನ್ನು ಆಳಲು ಸೂಕ್ತರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ದೇಶದ ಮತದಾರ ಉತ್ತರ ನೀಡಿದ್ದಾನೆ. ಬಹುತೇಕ ಭಾರತೀಯರು ಮೋದಿ ಅವರನ್ನೇ ಮತ್ತೊಮ್ಮೆ ಪ್ರಧಾನಿ ಸ್ಥಾನದಲ್ಲಿ ನೋಡಲು ಬಯಸಿದ್ದು, ಇನ್ನೂ ಕೆಲವರು ರಾಹುಲ್ ಅವರಲ್ಲಿ ಭವಿಷ್ಯದ ಪ್ರಧಾನಿಯನ್ನು ಕಂಡಿದ್ದಾರೆ.

ಅದರಂತೆ ಮೋದಿ- ರಾಹುಲ್ ನಡುವಿನ ಶೇಕಡಾವಾರು ಆಯ್ಕೆಯತ್ತ ಗಮನಹರಿಸಿದರೆ..

ಗೃಹಣಿಯರ ವಲಯ:

ನರೇಂದ್ರ ಮೋದಿ-ಶೇ.43.3

ರಾಹುಲ್ ಗಾಂಧಿ-ಶೇ.37.2

ಸರ್ಕಾರಿ ನೌಕರರ ವಲಯ:

ನರೇಂದ್ರ ಮೋದಿ-ಶೇ.61.1

ರಾಹುಲ್ ಗಾಂಧಿ-ಶೇ. 26

ಭೂಮಿ ರಹಿತ ಕೃಷ್ಇ ಕಾರ್ಮಿಕ ವಲಯ:

ನರೇಂದ್ರ ಮೋದಿ-ಶೇ. 48.2

ರಾಹುಲ್ ಗಾಂಧಿ-ಶೇ.35.4

ಸಾಮಾನ್ಯ ಕಾರ್ಮಿಕ ವಲಯ:

ನರೇಂದ್ರ ಮೋದಿ-ಶೇ.48.9

ರಾಹುಲ್ ಗಾಂಧಿ-ಶೇ.35

ನಿರುದ್ಯೋಗಿ ಯುವ ವಲಯ:

ನರೇಂದ್ರ ಮೋದಿ-ಶೇ. 63.6

ರಾಹುಲ್ ಗಾಂಧಿ-ಶೇ.26

Follow Us:
Download App:
  • android
  • ios