ಮೀರಠ್(ಮಾ.28): 2019 ರ ಲೋಕಸಭೆ ಚುನಾವಣೆಯನ್ನು ಧಮ್ದಾರ್ ಮತ್ತು ದಗಾದಾರ್ ನಡುವಿನ ಕದನ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಮೀರತ್‌ನಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2019ರಲ್ಲಿ ಮತ್ತೆ ಮೋದಿ ಸರ್ಕಾರ ಎಂದು ದೇಶದ ಜನತೆ ತೀರ್ಮಾನಿಸಿದ್ದಾರೆ ಎಂದು ಹೇಳಿದರು.

ಈ ಚುನಾವಣೆ ರಕ್ಷಕರ ಮತ್ತು ಕಳ್ಳರ ನಡುವಿನ ಹೋರಾಟವಾಗಿದ್ದು, ಜನತೆ ರಕ್ಷಕರ ಪರವಾಗಿ ನಿಲ್ಲಲ್ಲಿದ್ದಾರೆ ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು. ಚೌಕಿದಾರ್ ಸರ್ಕಾರದಿಂದಲೇ ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆದಿದ್ದು ಎಂಬ ಸತ್ಯ ದೇಶದ ಜನತೆಗೆ ಗೊತ್ತಿದೆ ಎಂದು ಪ್ರಧಾನಿ ಹೇಳಿದರು.

ಇನ್ನು ಮೀರತ್‌ ಭಾಷಣದ ಬಳಿಕ ಪ್ರಧಾನಿ ಉತ್ತರಾಖಂಡ್ ನ ರುದ್ರಾಪೂರ್, ಜಮ್ಮು ಮತ್ತು ಕಾಶ್ಮೀರದ ಅಕ್ನೂರ್ ನಲ್ಲಿಯೂ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಎಲ್ಲಾ ಕ್ಷೇತ್ರಗಳಲ್ಲೂ ಇದೇ ಏ.11ರಂದು ಮತದಾನ ನಡೆಯಲಿದೆ.