ಬೆಂಗಳೂರು[ಮಾ.19]: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 13 ಡಿವೈಎಸ್ಪಿ/ ಎಸಿಪಿ ಹಾಗೂ 50 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡ ಡಿವೈಎಸ್ಪಿ:

ವೆಂಕಟಪ್ಪ ನಾಯಕ್‌- ಗುಪ್ತಚರ ವಾರ್ತೆ, ಆರ್‌.ವಿ.ಚೌಡಪ್ಪ- ಹೈಕೋರ್ಟ್‌ ಭದ್ರತೆ, ಟಿ.ಕೋದಂಡರಾಮ- ಕೋಲಾರ ಉಪ ವಿಭಾಗ, ಸುಧಾಮ ಬೊಮ್ಮಯ್ಯ ನಾಯಕ್‌- ಗುಪ್ತಚರ ವಾರ್ತೆ, ಪಡಗಣ್ಣನವರ್‌- ಉತ್ತರ ವಲಯದ ಐಜಿಪಿ ಕಚೇರಿ, ಆರ್‌.ವಾಸು- ಡಿಸಿಆರ್‌ಬಿ (ಮೈಸೂರು), ಎನ್‌.ಎಸ್‌.ಚಂದ್ರಶೇಖರ್‌- ಸಿಸಿಬಿ, ಜಿ.ವೈ.ಗುಡಗಿ-ಡಿಸಿಆರ್‌ಬಿ (ವಿಜಯಪುರ), ವಾಸುದೇವ ರಾಮ- ಡಿಸಿಆರ್‌ಬಿ (ದಾವಣಗೆರೆ), ವೀರೇಶ್‌- ಕಲ್ಬುರ್ಗಿ ಸಂಚಾರ ಉಪ ವಿಭಾಗ, ಜಿ.ಮಂಜುನಾಥ್‌- ಪೂರ್ವ ವಲಯ ಐಜಿಪಿ ಕಚೇರಿ (ದಾವಣಗೆರೆ), ರಾಜೇಂದ್ರ ಅಂಬಡಗಟ್ಟಿ- ಪೂರ್ವ ವಲಯ ಐಜಿಪಿ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.