ಮಲ್ಲೇಶ್ವರಂ ಎಂಎಲ್ಎ ಕಾಲೇಜಿನಲ್ಲಿ ಯುವಸೌರಭದ ಸಂಭ್ರಮ

ಮಲ್ಲೇಶ್ವರಂ ನಲ್ಲಿನ ಎಂಎಲ್ಎ ಕಾಲೇಜಿನಲ್ಲಿ ಸಂಭ್ರಮದ 'ಯುವ ಸೌರಭ' ಕಾರ್ಯಕ್ರಮ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಭಗತ್ ಸಿಂಗ್' ನಾಟಕ ಪ್ರದರ್ಶನದ ಜತೆಗೆ ಜಾನಪದ ಗಾಯನ, ಡೊಳ್ಳು ಕುಣಿತ ಮತ್ತು ಕಂಸಾಳೆ ಕಲಾ ಪ್ರದರ್ಶನ ನಡೆಯಿತು.

Yuva Sourabha at MLA Academy of Higher Learning College Malleswaram  gow

ಬೆಂಗಳೂರು (ಆ. 20): ಮಲ್ಲೇಶ್ವರಂ ನಲ್ಲಿನ ಎಂಎಲ್ಎ ಕಾಲೇಜಿನಲ್ಲಿ ಶನಿವಾರ ಸಂಭ್ರಮದ 'ಯುವ ಸೌರಭ' ಕಾರ್ಯಕ್ರಮ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಭಗತ್ ಸಿಂಗ್' ನಾಟಕ ಪ್ರದರ್ಶನದ ಜತೆಗೆ ಜಾನಪದ ಗಾಯನ, ಸಮೂಹ ನೃತ್ಯ, ಸುಗಮ ಸಂಗೀತ, ಡೊಳ್ಳು ಕುಣಿತ ಮತ್ತು ಕಂಸಾಳೆ ಕಲಾ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ,  ಅಭಿವೃದ್ಧಿ ಹೊಂದಿದ ಮತ್ತು ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಯುವಜನರ ಕೊಡುಗೆ ಅತ್ಯಂತ ಮೌಲಿಕವಾದುದು ಎಂದರು. ಯುವಜನರಿಗೆ ಗುಣಮಟ್ಟದ ಸಮಕಾಲೀನ ಶಿಕ್ಷಣ ಮತ್ತು ಕನಸಿನ ಉದ್ಯೋಗ ಸಿಗುವಂತೆ ಮಾಡಲು ಸ್ಕಿಲ್ ಕನೆಕ್ಟ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ಆಧುನಿಕ ಕೌಶಲ್ಯಗಳನ್ನು ಕಲಿಸಲಾಗುತ್ತಿದ್ದು, ನಿರುದ್ಯೋಗ ನಿವಾರಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಮತ್ತು ಸಮಗ್ರ ಕಲಿಕೆಗೆ ಆದ್ಯತೆ ಕೊಡಲಾಗಿದೆ. ಉದ್ಯಮ ವಲಯಕ್ಕೆ ಬೇಕಾದ ನುರಿತ ಮಾನವ ಸಂಪನ್ಮೂಲವನ್ನು ಒದಗಿಸಲು ಕರ್ನಾಟಕವು ಸಮರ್ಥವಾಗಿದೆ ಎಂದು ಅವರು ಪ್ರತಿಪಾದಿಸಿದರು.

 

ಭಾರತ ಮತ್ತು ಜಗತ್ತಿನ ಪ್ರತಿಭಾವಂತರನ್ನು ಬೆಂಗಳೂರು ಆಕರ್ಷಿಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ಅವಕಾಶಗಳ ಕೊರತೆಯಾಗಲಿ, ಹಣದುಬ್ಬರದ ಬಿಸಿಯಾಗಲಿ ಇಲ್ಲ. ಒಟ್ಟಾರೆ ರಾಜ್ಯದಲ್ಲಿ ಅತ್ಯುತ್ತಮ ಕಾರ್ಯ ಪರಿಸರವಿದೆ ಎಂದು ಅವರು ನುಡಿದರು.

ಕಲಿಕೆಯ ತಾಣಗಳಲ್ಲಿ ಸ್ವಾತಂತ್ರ್ಯ ಇದ್ದಾಗ ಯುವಜನರಿಂದ ಸೃಜನಶೀಲ ಸಾಧನೆಗಳು ಸಾಧ್ಯವಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ವಿನೂತನ ಅನುಭವಗಳಿಗೆ ತೆರೆದು ಕೊಳ್ಳಬೇಕು ಎಂದು ಅಶ್ವತ್ಥ ನಾರಾಯಣ ಸಲಹೆ ನೀಡಿದರು.

 

ಕಾರ್ಯಕ್ರಮದಲ್ಲಿ ಎಂಎಲ್ಎ ಸಂಸ್ಥೆಯ ಗೌರವ ಕಾರ್ಯದರ್ಶಿ ಲಕ್ಷ್ಮೀ ನಾಗೇಶ್ವರ, ಪ್ರಿನ್ಸಿಪಾಲ್ ಪಿ.ವಿ.ಪದ್ಮಜಾ,  ಸಮಯ ಪ್ರತಿಷ್ಠಾನದ ಅಧ್ಯಕ್ಷೆ ಮತ್ತು ಬಿಜೆಪಿ ನಾಯಕಿ ಕಾವೇರಿ ಕೇದಾರನಾಥ್ ಮುಂತಾದವರಿದ್ದರು.

Latest Videos
Follow Us:
Download App:
  • android
  • ios