ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಸಹಕಾರಿಯಾಗಿರುವ ಅತ್ಯುತ್ತಮ ಅಭ್ಯಾಸದ ವಿಧಾನವೆಂದರೆ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುವುದು.  ವಿಶೇಷವಾಗಿ ಏಕಾಗ್ರತೆಯನ್ನು ಸಾಧಿಸಲು ಈ ಯೋಗಾಸನವು ಭಾರಿ ಉಪಯೋಗಕಾರಿಯಾಗಿವೆ. ಅದರಲ್ಲೂ ವಿದ್ಯಾರ್ಥಿಗಳು ಯೋಗವನ್ನು ರೂಢಿಸಿಕೊಂಡರೆ ಅವರ ಶೈಕ್ಷಣಿಕ ಜೀವನಕ್ಕೆ ಹೆಚ್ಚಿನ ಉಪಯೋಗಕಾರಿಯಾಗಲಿದೆ.

ದೇಹವು ದೈಹಿಕವಾಗಿ ಆರೋಗ್ಯಕರವಾಗಿದ್ದರೆ, ಮನಸ್ಸು ಸ್ಪಷ್ಟ, ಕೇಂದ್ರೀಕೃತವಾಗಿರುತ್ತದೆ ಮತ್ತು ಒತ್ತಡವು ನಿಯಂತ್ರಣದಲ್ಲಿರುತ್ತದೆ. ದಿನದ 24 ಗಂಟೆಯಲ್ಲಿ ಕೇವಲ 20 ನಿಮಿಷ ಯೋಗ ಮಾಡಿದರೆ ಸಾಕು ನಮ್ಮ ದೇಹ ಹಾಗೂ ಮನಸ್ಸಿಗೆ ಸಂತೋಷ-ಶಕ್ತಿಯನ್ನು ನೀಡುತ್ತದೆ. ನಮ್ಮ ಉತ್ತಮ ಆರೋಗ್ಯಕ್ಕಾಗಿ ಪ್ರತಿ ದಿನ ಸುಲಭವಾಗಿ ಮಾಡಬಹುದಾದ ಕೆಲ ಯೋಗಾಭ್ಯಾಸಗಳ ಬಗ್ಗೆ ತಿಳಿಯೋಣ.

ಯೋಗ ಪದವಿ ಇದ್ದರೆ ಕೈತುಂಬಾ ದುಡಿಮೆ ಗ್ಯಾರಂಟಿ!

ಯೋಗ ಮುದ್ರ
ಅಧ್ಯಯನ ವೇಳೆ ಯೋಗ ಮುದ್ರವನ್ನು ಮಾಡುವುದ ತುಂಬ ಸರಳವಾಗಿದೆ. ಈ ಯೋಗವು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಪದ್ಮಾಸನದಲ್ಲಿ ಕುಳಿತುಕೊಳ್ಳಿ. ನಿಮ್ಮೆರಡು ಕೈಗಳನ್ನು ಜೋಡಿಸಿ. ನಿಮ್ಮ ಬೆನ್ನು ನೇರವಾಗಿರಲಿ ಮತ್ತು ದೀರ್ಘವಾಗಿ ಉಸಿರಾಟವನ್ನು ತೆಗೆದುಕೊಳ್ಳಿ. ನಿಮ್ಮ ದೃಷ್ಟಿಯನ್ನು ಪುಸ್ತಕಗಳಿಂದ ದೂರ ಸರಿಸಿ ಕನಿಷ್ಠ ಎರಡರಿದ ಐದು ನಿಮಿಷಗಳ ಕಾಲ ಕಣ್ಮುಚ್ಚಿ ಕುಳಿತುಕೊಳ್ಳಿ. ನಿಮ್ಮೆಲ್ಲ ಚಿಂತೆಗಳಿಂದ ಮನಸ್ಸನ್ನು ಮುಕ್ತಗೊಳಿಸಿ. ಇದೇ ರೀತಿ ದಿನಕ್ಕೆ 15 ನಿಮಿಷವಾದರೂ ಮಾಡಿ ಮತ್ತು ಫಲಿತಾಂಶವನ್ನು ಪಡೆದುಕೊಳ್ಳಿ.

ವೃಕ್ಷಾಸನ
ವಿದ್ಯಾರ್ಥಿಗಳು ತಮ್ಮ ಏಗ್ರಾಕತೆಯನ್ನು ಹೆಚ್ಚಿಸಿಕೊಳ್ಳಲು ಈ ಆಸನ ಮಾಡಲೇಬೇಕು. ಮತ್ತು ತುಂಬ ಸರಳವಾಗಿದೆಯೂ ಕೂಡ.  ಮೊದಲಿಗೆ ಬಲಗಾಲನ್ನು ಮೊಣಕಾಲಿನ ತನಕ ಬಗ್ಗಿಸಿ, ಬಲ ತೊಡೆಯ ಮೇಲೆ ಎತ್ತಿ ಬಲಗಾಲಿನ ಏಕೈಕ ಭಾಗವನ್ನು ಎಡ ತೊಡೆಯ ಒಳಭಾಗವನ್ನು ಸಾಧ್ಯವಾದಷ್ಟು ಎತ್ತರಕ್ಕೆ ತಂದುಕೊಳ್ಳಿ. ಎಡ ಪಾದದ ಮೇಲೆ ನಿಮ್ಮನ್ನು ಸಮತೋಲನಗೊಳಿಸಲು ಪ್ರಯತ್ನಿಸಿ. ಈಗ ಮೊಣಕೈಯನ್ನು ಬಗ್ಗಿಸದೆ ಇಟ್ಟುಕೊಂಡು ತಲೆಯ ಮೇಲೆ ಎರಡೂ ತೋಳುಗಳನ್ನು ಮೇಲಕ್ಕೆತ್ತಿ ನಿಮ್ಮ ಅಂಗೈಗಳನ್ನು ಪರಸ್ಪರ ಅಂಟಿಕೊಳ್ಳಿ. ಅಂದರೆ ನಮಸ್ಕಾರ ಭಂಗಿಯಲ್ಲಿರಲಿ. ಸುಮಾರು 10 ದೀರ್ಘ ಉಸಿರಾಟಗಳವರೆಗೂ ಇದೇ ಭಂಗಿಯಲ್ಲಿರು ಪ್ರಯತ್ನಿಸಿ. ತೋಳುಗಳು ಮತ್ತು ಬಲಗಾಲನ್ನು ರಿಲ್ಯಾಕ್ಸ್ ಮಾಡಿ ಮೊದಲಿನ ಸ್ಥಾನಕ್ಕೆ ಬನ್ನಿ. ಕೆಲವು ನಿಮಿಷಗಳ ನಂತರ ವಿರುದ್ಧ ಕಾಲಿನಿಂದ ಅದೇ ಪ್ರಕ್ರಿಯೆನ್ನು ಪುನರಾವರ್ತಿಸಿ. ಹೀಗೆ ಮಾಡುವುದರಿಂದ ನಿಮ್ಮ ಏಕಾಗ್ರತೆ ಹೆಚ್ಚಾಗಲಿದೆ.

ವೀರಾಸನ
ವಿದ್ಯಾರ್ಥಿಗಳಿಗೆ ತಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಇರುವ ಮತ್ತೊಂದ ಯೋಗಾಸನ. ಈ ಯೋಗ ಮಾಡಲು ಮೊದಲಿಗೆ, ಒಂದು ಕಾಲಿನ  ಮೊಣಕಾಲುಗಳು, ಕಾಲ್ಬೆರಳುಗಳು ನೆಲವನ್ನು ಸ್ಪರ್ಶಿಸುವಂತೆ ಕುಳಿತುಕೊಳ್ಳಿ. ಮತ್ತೊಂದು ಕಾಲಿನ ಪಾದ ನೆಲಕ್ಕೆ ಸ್ಪರ್ಶಿಸಿರಬೇಕು. ಸರಳವಾಗಿ ಹೇಳಬೇಕು ಎಂದರೆ ಮಂಡಿಯೂರಿರುವ ಭಂಗಿ. ಬಳಿಕ  ಅಂಗೈಗಳನ್ನು ಮೊಣಕಾಲುಗಳ ಮೇಲೆ ಇಡಬೇಕು. ನಿಮ್ಮ ಬೆನ್ನುನೇರವಾಗಿರುಬೇಕು. ಮತ್ತು ಉಸಿರಾಟವನ್ನು ಆಳವಾಗಿರಲಿ. ಈಗ, ನಿಮ್ಮ ಎಡ ಪಾದವನ್ನು ಬಲ ಮೊಣಕಾಲಿನ ಪಕ್ಕದಲ್ಲಿ ತರಬೇಕು. ನಿಮ್ಮ ಎಡ ಮೊಣಕೈಯನ್ನು ಎಡ ಮೊಣಕಾಲಿನ ಮೇಲೆ ಇರಿಸಿ ಮತ್ತು ಈಗ ನಿಮ್ಮ ಎಡಗೈಯಲ್ಲಿ ಗಲ್ಲವನ್ನು ರಿಲ್ಯಾಕ್ಸ್ ಭಂಗಿಯಲ್ಲಿ ಇರಲು ಬಿಡಿ. ಬಲಗೈ ಬಲ ತೊಡೆಯ ಮೇಲೆ ರಿಲ್ಯಾಕ್ಸ್ ಆಗಿರಲಿ. ಬಲ ಪಾದದ ಕಾಲ್ಬೆರಳುಗಳನ್ನು ಸರಿಯಾಗಿ ಕೆಳಗೆ ಇರಿಸಿ. ಬಲ ಮೊಣಕಾಲು ನೆಲಕ್ಕೆ ತಾಗಿರುವಂತೆ ನೋಡಿಕೊಳ್ಳಿ. ನಿಮ್ಮ ಎಲ್ಲ ತೂಕವನ್ನು ಬಲ ಹಿಮ್ಮಡಿಯ ಮೇಲೆ ವರ್ಗಾಯಿಸಿ. ಈಗ, ನಿಮ್ಮ ಮುಂದೆ ಇರುವ ಒಂದು ಬಿಂದುವನ್ನು ಕೇಂದ್ರೀಕರಿಸಿ, ಅದರ ಮೇಲೆ ಏಕಾಗ್ರತೆಯನ್ನು ಸಾಧಿಸಲು ಪ್ರಯತ್ನಿಸಿ.  ಈ ಹಂತದಲ್ಲಿ ಉಸಿರಾಟವು ಸಾಮಾನ್ಯವಾಗಿಯೇ ಇರಲಿ. ನೀವು ಆರಾಮವಾಗಿರುವವರೆಗೂ ನೀವು ವೀರಾಸನದ ಭಂಗಿಯಲ್ಲಿ ಉಳಿಯಬಹುದು.

School on Scooty: ಈ ಶಿಕ್ಷಕನಿಗೆ ನೀವು ಸೆಲ್ಯೂಟ್ ಹೊಡೆಯಲೇಬೇಕು!

ಉತ್ತಮ ಆರೋಗ್ಯಕ್ಕೆ ಈ ಯೋಗಗಳನ್ನು ರೂಢಿಸಿಕೊಳ್ಳಿ-  ಪ್ರಾಣಾಯಾಮ
'ಪ್ರಾಣ' ಅಂದ್ರೆ ಉಸಿರು. ದೇಹದ  ಅತ್ಯಂತ ಪ್ರಮುಖ ಶಕ್ತಿ ಇದು. ಈ ’ಉಸಿರಾಟವನ್ನ ನಿಯಂತ್ರಿಸುವುದೇ ಪ್ರಾಣಾಯಾಮ. ಪ್ರಾಣಾಯಾಮದ ಮೂಲಕ ಜೀವಶಕ್ತಿಯ ಲಯದ ಮೇಲೆ ನಿಯಂತ್ರಣ ಸಾಧಿಸಿ ಆ ಮೂಲಕ ದೇಹ ಹಾಗೂ ಮನಸ್ಸಿನ ಆರೋಗ್ಯ ವೃದ್ಧಿಸಿಕೊಳ್ಳಬಹುದು. ವ್ಯಕ್ತಿಯ ಅರಿವಿನ ಉನ್ನತ ಸ್ಥಿತಿಗೆ ತಲುಪಿಸುವ ಸಾಧನ ಇದಾಗಿದೆ.ಸಮಾಧಿ ಸ್ಥಿತಿಗೆ ತಲುಪಲು ಉಸಿರಾಟದ ಮೇಲಿನ ನಿಯಂತ್ರಣ ಅಗತ್ಯ ಎಂದು ಪತಂಜಲಿ ಮುನಿಯ ಯೋಗಸೂತ್ರದಲ್ಲಿ ತಿಳಿಸಲಾಗಿದೆ. ಪ್ರಾಣಾಯಾಮ ಎಂಬುದು ದೇಹದಲ್ಲಿ ಸಕಾರಾತ್ಮಕ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ವಿಷವನ್ನು ತೆಗೆದುಹಾಕುವ ಪರಿಪೂರ್ಣ ಉಸಿರಾಟದ ವ್ಯಾಯಾಮವಾಗಿದೆ ಮತ್ತು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಪ್ರಾಣಾಯಾಮ ಮಾಡುವುದರಿಂದಾಗಿ ಉಸಿರಾಟದ ಸಮಸ್ಯೆಗಳು ಹತೋಟಿಗೆ ಬರುತ್ತವೆ.


 
ಕಪಾಲಭಾತಿ
ಕಪಾಲ ಅಂದ್ರೆ ಹಣೆ ಅಥವಾ ಮೆದುಳಿನ ಮುಂಭಾಗ. ಭಾತಿ ಅಂದ್ರೆಬೆಳಕು ಅಥವಾ ಜಾನ. ಕಪಾಲಭಾತಿಯು ಉಸಿರಾಟ ವ್ಯಾಯಾಮದ ಒಂದು ವಿಧವಾಗಿದ್ದು, ಇದು ಕಾಲಕಾಲಕ್ಕೆ ಉಸಿರಾಟ ಸಮಸ್ಯೆ ಸೇರಿದಂತೆ ಹಲವು ಕಾಯಿಲೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು ಮಧುಮೇಹದ ನಿಯಂತ್ರಣ, ಬೆನ್ನು ನೋವು, ಅಜೀರ್ಣದಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಷ್ಟೇ ಅಲ್ಲ ಕಪಾಲಭಾತಿ ಮಾಡುವುದರಿಂದ ಮನಸ್ಸು-ಶರೀರ ಸದಾ ಉತ್ಸಾಹ ಹಾಗೂ ಉಲ್ಲಾಸದಿಂದ ಇರುತ್ತದೆ.

ಸೂರ್ಯ ನಮಸ್ಕಾರ
ಸೂರ್ಯನಿಗೆ ಅಭಿಮುಖವಾಗಿ ನಿಂತು ನಮಸ್ಕಾರ ಮಾಡುವ ವಿಧಾನವೇ ಸೂರ್ಯ ನಮಸ್ಕಾರ. ಸೂರ್ಯ ನಮಸ್ಕಾರವು ಅತ್ಯಂತ ಪ್ರಮುಖ ಯೋಗ ಪದ್ಧತಿಗಳಲ್ಲಿ ಒಂದಾಗಿದೆ. 12 ವಿಭಿನ್ನ ಮಂತ್ರಗಳನ್ನು ಪಠಿಸುವ ಮೂಲಕ 12 ಪ್ರಕಾರದ ಯೋಗಾಸನಗಳನ್ನು ಮಾಡಲಾಗುತ್ತದೆ. ಬೆಳಗ್ಗೆ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಂದರ್ಭದಲ್ಲಿ ಸೂರ್ಯನಮಸ್ಕಾರ ಮಾಡಿದರೆ ಹೆಚ್ಚು ಪ್ರಯೋಜನಕಾರಿ.ಈ ಯೋಗಾಭ್ಯಾಸವು ದೇಹಕ್ಕೆ ಮತ್ತು ಮಾನಸಿಕವಾಗಿ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಪತ್ರ ಬರೆದು, ಚಿನ್ನದ ಪದಕ ಗೆದ್ದು, ಸ್ವಿಜರ್ಲೆಂಡ್‌ಗೆ ಹೋಗಿ!

ತಾಡಾಸನ
ಸಂಸ್ಕೃತದಲ್ಲಿ ತಾಡಾ ಎಂದರೆ ಪರ್ವತ ಎಂದರ್ಥ. ಈ ಭಂಗಿಗೆ ಸಮಸ್ಥಿತಿ ಆಸನ ಅಂತಲೂ ಕರೆಯುತ್ತಾರೆ. ಸಮ ಅಂದ್ರೆ ನೇರ ಅಥವಾ ಕದಲದ ಸ್ಥಿತಿ. ಕೈಗಳನ್ನು ನೇರವಾಗಿ ಮೇಲಕ್ಕೆತ್ತಿ ಸಮಸ್ಥಿತಿಯಲ್ಲಿ ನಿಲ್ಲುವುದು. ನಿಂತುಕೊಂಡು ಮಾಡುವಂತಹ ಎಲ್ಲಾ ರೀತಿ ಆಸನಗಳಿಗೆ ಇದು ಮೂಲ ಎಂದು ಹೇಳಲಾಗುತ್ತದೆ. ಇದು ನಿಮ್ಮ ಪಾದಗಳು ಮತ್ತು ಕಾಲುಗಳಿಗೆ ಸಾಕಷ್ಟು ರಕ್ತ ಪರಿಚಲನೆ ನೀಡುವ ಮೂಲಕ ಹೆಚ್ಚು ಶಕ್ತಿ ಒದಗಿಸುತ್ತದೆ ಮತ್ತು ಮಾನಸಿಕ ಸ್ಥಿಮಿತತೆಯನ್ನು ನೀಡುವುದರ ಜೊತೆಗೆ ಖಿನ್ನತೆಯನ್ನು ನಿವಾರಿಸುತ್ತದೆ ಮತ್ತು ನಿಮಗೆ ಚೈತನ್ಯವನ್ನು ತುಂಬುತ್ತದೆ.
 
ಶವಾಸನ
ಸಂಸ್ಕೃತದಲ್ಲಿ ಶವ ಅಂದ್ರೆ 'ಮೃತದೇಹ' ಎಂದರ್ಥ. ಹಾಗಾಗಿ ಶವಾಸನ ಮಾಡುವ ಯೋಗಿಯು ನೆಲದ ಮೇಲೆ ಶವದಂತೆ ಅಂಗಾತ ಮಲಗಬೇಕು. ಬೆನ್ನಿನ ಮೇಲೆ ನೇರವಾಗಿ ಮಲಗಿ ಕಣ್ಣುಗಳನ್ನು ಮುಚ್ಚಿ ವಿಶ್ರಮಿಸಿ ಆಳವಾದ ಉಸಿರನ್ನು ತೆಗೆದು ನಿಧಾನವಾಗಿ ಹೊರಹಾಕಬೇಕು. ಈ ಆಸನದ ಮೂಲಕ ನಿಜವಾದ ವಿಶ್ರಾಂತಿ ಅಂದರೇನು ಎಂಬುದರ ಅರಿವಾಗುತ್ತದೆ. ಶವಾಸನವು ನಿಮ್ಮ ಇಡೀ ದೇಹವನ್ನು ಸಡಿಲಗೊಳಿಸುತ್ತದೆ ಮತ್ತು ಒತ್ತಡ, ಆಯಾಸ, ಖಿನ್ನತೆಯನ್ನು ಬಿಡುಗಡೆ ಮಾಡಿ ನಿದ್ರಾಹೀನತೆಯನ್ನು ಗುಣಪಡಿಸುತ್ತದೆ.