ಕೇಂದ್ರ ಸರ್ಕಾರದ ಪಢನಾ-ಲಿಖನಾ ಕಾರ್ಯಕ್ರಮ, ರಾಜ್ಯದ 5 ಜಿಲ್ಲೆಗಳಲ್ಲಿ ಪ್ರಾರಂಭ
* ಕೇಂದ್ರ ಸರ್ಕಾರದ ಪಢನಾ-ಲಿಖನಾ ಕಾರ್ಯಕ್ರಮ
* ರಾಜ್ಯದ 5 ಜಿಲ್ಲೆಗಳಲ್ಲಿ ಪ್ರಾರಂಭ
* ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ
ಬೆಂಗಳೂರು, (ಸೆ.14): ಕೇಂದ್ರ ಸರ್ಕಾರದ ಪಢನಾ-ಲಿಖನಾ ಕಾರ್ಯಕ್ರಮವನನ್ನು ರಾಜ್ಯದ 5 ಜಿಲ್ಲೆಗಳಲ್ಲಿ ಪ್ರಾರಂಭ ಮಾಡಲಾಗಿದೆ.
ರಾಯಚೂರು, ಕಲಬುರಗಿ, ಯಾದಗಿರಿ, ಚಾಮರಾಜನಗರ, ವಿಜಯಪುರದಲ್ಲಿ ಕಾರ್ಯಕ್ರಮ ಮಾಡಲಾಗಿದೆ ಎಂದು ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದರು.
150 ಐಟಿಐಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೆ
55ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಅವರು, 2021-22ನೇ ಸಾಲಿನ ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಕ್ಷರತಾ ಸಪ್ತಾಹಕ್ಕೆ ಚಾಲನೆ ನೀಡಿದರು
ಬಳಿಕ ಮಾತನಾಡಿದ ಅವರು, ಅಮೃತ ಮಹೋತ್ಸವದ ಒಳಗೆ ರಾಜ್ಯವನ್ನ ಅನಕ್ಷರಸ್ಥರ ಮುಕ್ತ ರಾಜ್ಯ ಮಾಡುವ ಗುರಿ ನಮಗೆ ಇದೆ. 75 ವರ್ಷ ಆದರು ಇನ್ನು ಓದಲು-ಬರೆಯಲು ಬಾರದವರು ಇದ್ದಾರೆ ಅಂದರೆ ನಮಗೂ ನಾಚಿಕೆ ಆಗಬೇಕು. ಹೀಗಾಗಿ ಇದಕ್ಕೆ ವಿಶೇಷ ಗಮನ ಕೊಡಬೇಕು ಎಂದು ಸಚಿವ ಬಿಸಿ ನಾಗೇಶ್ ಡಿಸಿಗಳಿಗೆ ಸೂಚನೆ ನೀಡಿದರು.
ಕೋವಿಡ್ ಕಾರಣದಲ್ಲಿ ಸಾಕ್ಷರತಾ ಕಾರ್ಯಕ್ರಮ ಅರ್ಧಕ್ಕೆ ನಿಂತಿದೆ. ಅನಕ್ಷರಸ್ತರಿಗೆ ಅಕ್ಷರಸ್ಥರಾಗಿ ಮಾಡೋ ಕಾರ್ಯಕ್ರಮ ನಿಂತು ಹೋಗಿತ್ತು. ಈಗ ಮತ್ತೆ ಈ ಕಾರ್ಯಕ್ರಮ ಪ್ರಾರಂಭ ಆಗಿದೆ.ಈ ವರ್ಷ ವಿಶೇಷವಾಗಿ ಎಲ್ಲಿ ಅನಕ್ಷರಸ್ಥರು ಇರುತ್ತಾರೋ ಅಲ್ಲಿಯೇ ಹೋಗಿ ಕಲಿಸುತ್ತೇವೆ. ಅನಕ್ಷರಸ್ಥರ ಸಂಖ್ಯೆ ಈ ವರ್ಷ ಕಡಿಮೆ ಮಾಡಬೇಕು ಅನ್ನೋದು ನಮ್ಮ ಗುರಿ ಎಂದರು.
ಕೇಂದ್ರ ಸರ್ಕಾರದ 60% ಅನುದಾನ ನಮಗೆ ಸಿಗುತ್ತಿದೆ. ಎನ್.ಜಿ.ಓ. ಮಠಗಳು, ಅಥವಾ ಶಿಕ್ಷಣ ಇಲಾಖೆ ಬಳಸಿಕೊಂಡು ಅನಕ್ಷರಸ್ಥರ ಸಂಖ್ಯೆ ಕಡಿಮೆ ಮಾಡಲು ಕ್ರಮವಹಿಸಲು ಚಿಂತನೆ ಮಾಡಲಾಗಿದೆ ಎಂದು ವಿವರಿಸಿದರು.