Asianet Suvarna News Asianet Suvarna News

West Bengal 10th Exam: SSLC ಪರೀಕ್ಷೆ ಹಿನ್ನೆಲೆ ಇಂಟರ್ನೆಟ್ ಬಂದ್‌ ಮಾಡಿದ ದೀದಿ ಸರಕಾರ


ಪ್ರಶ್ನೆ ಪತ್ರಿಕೆ ಸೋರಿಕೆ  ಮತ್ತು ನಕಲು ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಇಂಟೆಲಿಜೆನ್ಸ್ ವರದಿ ನೀಡಿದ ಹಿನ್ನೆಲೆಯಲ್ಲಿ  ಕೊಲ್ಕತ್ತಾ ಸರಕಾರ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.

West bengal bans internet on class 10 board exam gow
Author
Bengaluru, First Published Mar 7, 2022, 7:30 PM IST | Last Updated Mar 7, 2022, 7:30 PM IST

ಕೋಲ್ಕತ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಂಚನೆ ತಡೆಗಟ್ಟಲು ಪಶ್ಚಿಮ ಬಂಗಾಳ (West Bengal) ಸರ್ಕಾರ ರಾಜ್ಯದ ಕೆಲ ಸ್ಥಳಗಳಲ್ಲಿ ಇಂಟರ್ನೆಟ್ (Internet) ಸೇವೆಗೆ ತಾತ್ಕಾಲಿಕ ನಿರ್ಬಂಧ ಹೇರಿರುವ ಘಟನೆ ವರದಿಯಾಗಿದೆ.  ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವ್ಯಾಪಕವಾಗಿ ನಕಲು ಮಾಡುವ ಬಗ್ಗೆ ಇಂಟೆಲಿಜೆನ್ಸ್ ವರದಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.

ಮಾರ್ಚ್  7 ರಿಂದ ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿ (West Bengal Board of Secondary Education - WBBSE) ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತಿದ್ದು, ಈ ವರ್ಷ, ಒಟ್ಟು 11,18,821 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ, ಇದರಲ್ಲಿ 6,21,931 ಬಾಲಕಿಯರು ಮತ್ತು 4,96,890 ಬಾಲಕರಿದ್ದಾರೆ. ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ರಾಜ್ಯದಾದ್ಯಂತ 4,194 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುತ್ತಿದೆ. ಇವುಗಳಲ್ಲಿ ಕೋಲ್ಕತ್ತಾದಲ್ಲಿ 1,934 ಕೇಂದ್ರಗಳು ಇವೆ.  ಪೇಪರ್ ಸೋರಿಕೆ, ಅಹಿತಕರ ಚಟುವಟಿಕೆಗಳನ್ನು ತಪ್ಪಿಸಲು ಸೂಕ್ಷ್ಮ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.2019 ಮತ್ತು 2020ರಲ್ಲಿ ಮಾಲ್ಡಾ, ಮುರ್ಷಿದಾಬಾದ್ ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. 

ಇದೀಗ ಕಾನೂನುಬಾಹಿರ ಚಟುವಟಿಕೆಗಳನ್ನು ತಪ್ಪಿಸಲು ತಡೆಗಟ್ಟುವ ಕ್ರಮವಾಗಿ ಮಾರ್ಚ್ 7 ಮತ್ತು ಮಾರ್ಚ್ 16 ರ ನಡುವೆ ಏಳು ದಿನಗಳ ಕಾಲ ಬಂಗಾಳದ ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ರಾಜ್ಯ ಸರಕಾರ ಹೇಳಿದೆ. ಮಾಲ್ಡಾ, ಮುರ್ಷಿದಾಬಾದ್, ಉತ್ತರ ದಿನಾಜ್‌ಪುರ್, ಕೂಚ್‌ಬೆಹಾರ್, ಜಲ್ಪೈಗುರಿ, ಬಿರ್ಭುಮ್ ಮತ್ತು ಡಾರ್ಜಿಲಿಂಗ್ ಜಿಲ್ಲೆಗಳಲ್ಲಿ ಇಂಟರ್ನೆಟ್  ಸ್ಥಗಿತಗೊಳಿಸಿದೆ. ಮಾರ್ಚ್ 7 ರಿಂದ ಮಾರ್ಚ್ 16 ರವರೆಗೆ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 3:15 ರವರೆಗೆ ಇಂಟರ್‌ನೆಟ್‌ ಸ್ಥಗಿತವಾಗಲಿದೆ.

ಸ್ವಲ್ಪ ತಾಳ್ಮೆಯಿಂದಿರಿ, ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ರಾಯಭಾರಿ ಕಚೇರಿ ಮನವಿ

2021ರಲ್ಲಿ ಕೋವಿಡ್ ಕಾರಣಕ್ಕೆ ಪರೀಕ್ಷೆ ನಡೆದಿರಲಿಲ್ಲ ಅದಕ್ಕೂ ಮುನ್ನ  2019 ಮತ್ತು 2020 ರಲ್ಲಿ ಪರೀಕ್ಷೆಗಳು ಪ್ರಾರಂಭವಾದ ಒಂದು ಗಂಟೆಯೊಳಗೆ ಮಾಲ್ಡಾ ಮತ್ತು ಮುರ್ಷಿದಾಬಾದ್ ಸೇರಿದಂತೆ ಹಲವು ಜಿಲ್ಲೆಗಳ ಕೆಲವು ಪರೀಕ್ಷಾ ಕೇಂದ್ರಗಳಿಂದ ಸಾಮಾಜಿಕ ಜಾಲತಾಣದ ಮೂಲಕ  ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿತ್ತು ಈ ಹಿನ್ನೆಲೆಯಲ್ಲಿ  ಹಿನ್ನೆಲೆಯಲ್ಲಿ ಈ ಕ್ರಮವು ಅನಿವಾರ್ಯವಾಗಿದೆ ಎಂದು ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿ ಹೇಳಿದೆ. 

ಇನ್ನು ಮಾರ್ಚ್ 10 ರಂದು ಯುಪಿ, ಗೋವಾ, ಮಣಿಪುರ, ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ವಿಧಾನಸಭಾ ಚುನಾವಣೆಗಳ ಎಣಿಕೆ ನಡೆಯಲಿದ್ದು, ಅಂದು  ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದಿಲ್ಲ ಎಂದು ತಿಳಿದುಬಂದಿದೆ. ಕರೆಗಳು ಮತ್ತು SMS ಕಳುಹಿಸಲು ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ. 

ಶಿಕ್ಷಕನ ಶಿಕ್ಷೆಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಲೇರಿದ ತೆಲಂಗಾಣದ 2 ನೇ ತರಗತಿಯ ಬಾಲಕ!

ಮುಂದಿನ ಕೆಲವು ದಿನಗಳಲ್ಲಿ ಕೆಲವು ಪ್ರದೇಶಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಇಂಟರ್ನೆಟ್  ಬಳಕೆಯಾಗಲಿದೆ ಎಂಬ ಗುಪ್ತಚರ ಇಲಾಖೆಯ ವರದಿಯನ್ನು ಆಧರಿಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಪಶ್ಚಿಮ ಬಂಗಾಳ ಸರಕಾರ ಹೇಳಿದೆ.

ಮೊಬೈಲ್ ಫೋನ್‌ಗಳು, ಎಲೆಕ್ಟ್ರಾನಿಕ್ ಸಾಧನಗಳು, ಹೆಡ್‌ಫೋನ್‌ಗಳು ಮತ್ತು ಯಾವುದೇ ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ ಎಂದು ಕಟ್ಟಿನಿಟ್ಟಿನ ಆದೇಶ ಹೊರಡಿಸಲಾಗಿದೆ. ಕೆಲವೊಂದು ಮೂಲಗಳ ಪ್ರಕಾರ, ಪರೀಕ್ಷೆಯ ಹಿಂದಿನ ದಿನವೇ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು ಆದರೆ ಅದನ್ನು ಘೋಷಿಸಲಾಗಿಲ್ಲ.

ಮೊದಲು ವಿದ್ಯಾರ್ಥಿಗಳ ಸ್ಥಳಾಂತರ ಬಳಿಕವೇ ಶಿಕ್ಷಣಕ್ಕೆ ನೆರವು: ಸಚಿವ ಅಶ್ವತ್ಥ್ ನಾರಾಯಣ್

Latest Videos
Follow Us:
Download App:
  • android
  • ios