Asianet Suvarna News Asianet Suvarna News

Guest lecturers Salary Hike: ಸಂಬಳ ಏರಿಸಿದ್ದೇವೆ, ಮುಷ್ಕರ ನಿಲ್ಲಿಸಿ: ಸಚಿವ ಅಶ್ವತ್ಥ್ ಮನವಿ

*ನಾಳೆಯಿಂದಲೇ ನೇಮಕ ಪ್ರಕ್ರಿಯೆ ಆರಂಭ: ನೇಮಕಾತಿಗೆ ಅರ್ಜಿ ಸಲ್ಲಿಸಿ
*ಅತಿಥಿ ಉಪನ್ಯಾಸಕರಿಗೆ  ಅತ್ಯುತ್ತಮ ಪ್ಯಾಕೇಜ್‌:  ಅಶ್ವತ್ಥನಾರಾಯಣ
 

We Have increased salary stop protesting says CN Ashwath Narayan to Guest lecturers mnj
Author
Bengaluru, First Published Jan 16, 2022, 9:07 AM IST

ಬೆಂಗಳೂರು (ಜ. 16): ಅತಿಥಿ ಉಪನ್ಯಾಸಕರ (Guest Lecture) ಸಮಸ್ಯೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಅವರ ವೇತವನ್ನು ಎರಡು ಪಟ್ಟಿಗಿಂತಲೂ ಹೆಚ್ಚು ಏರಿಸಿರುವುದರಿಂದ ಎಲ್ಲರೂ ಮುಷ್ಕರ ಕೈಬಿಟ್ಟು ತಕ್ಷಣ ಬೋಧನಾ ಕಾರ್ಯಕ್ಕೆ ಹಿಂದಿರುಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ (CN Ashwath Narayan) ಮನವಿ ಮಾಡಿದ್ದಾರೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಆನ್‌ಲೈನ್‌ ಮೂಲಕ ಅತಿಥಿ ಉಪನ್ಯಾಸಕರನ್ನು ನೇಮಕ (Recruitment) ಮಾಡಿಕೊಳ್ಳುವ ಪ್ರಕ್ರಿಯೆ ಸೋಮವಾರದಿಂದ (ಜ.17) ಆರಂಭವಾಗಲಿದ್ದು, ಮುಷ್ಕರ ಬಿಟ್ಟು ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸಚಿವರು ಅತಿಥಿ ಉಪನ್ಯಾಸಕರಿಗೆ ಸೂಚನೆ ನೀಡಿದ್ದಾರೆ.

‘ಸರ್ಕಾರ ಘೋಷಿಸಿರುವ ವೇತನ ಹೆಚ್ಚಳದ ಪ್ಯಾಕೇಜ್‌ನಿಂದ ಸಮಾಧಾನವಾಗಿಲ್ಲ. ನಾವು ಕೇಳಿರುವುದು ಸೇವಾ ಭದ್ರತೆ, ಅದು ಈಡೇರುವವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆ’ ಎಂದು ಕೆಲ ಅತಿಥಿ ಉಪನ್ಯಾಸಕರ ಸಂಘಟನೆಗಳು ಹೇಳಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ಸಚಿವರು ಪತ್ರಿಕಾ ಪ್ರಕಟಣೆ ಮೂಲಕ ಈ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Guest Lecturer ಸಂಕ್ರಾಂತಿ ಕೊಡುಗೆ ಶುದ್ಧ ಸುಳ್ಳು, ಸರ್ಕಾರದ ತೀರ್ಮಾನಕ್ಕೆ ಅತಿಥಿ ಉಪನ್ಯಾಸಕರ ಆಕ್ರೋಶ

‘ಅತಿಥಿ ಉಪನ್ಯಾಸಕರಿಗೆ ನಮ್ಮ ಸರ್ಕಾರ ಅತ್ಯುತ್ತಮವಾದ ಪ್ಯಾಕೇಜ್‌ ನೀಡಿದೆ. ಇದುವರೆಗೂ ಯುಜಿಸಿ ಅರ್ಹತೆ ಇಲ್ಲದವರು ಕೇವಲ 11 ಸಾವಿರ ರು., ಯುಜಿಸಿ ಅರ್ಹತೆ ಇರುವವರಿಗೆ 13 ಸಾವಿರ ಅಷ್ಟೇ ಮಾಸಿಕ ವೇತನ ಇತ್ತು. ಅದನ್ನು ನಮ್ಮ ಸರ್ಕಾರ ಒಮ್ಮೆಲೇ ಕ್ರಮವಾಗಿ 28 ಸಾವಿರ ರು. ಮತ್ತು 32 ಸಾವಿರ ರು.ಗಳಿಗೆ ಹೆಚ್ಚಳ ಮಾಡಿದೆ. ಆದರೂ, ಇದು ಸಮಾಧಾನ ಇಲ್ಲ ಎಂದು ಹೇಳಿ ಮುಷ್ಕರ ಮುಂದುವರೆಸಿರುವುದು ಸರಿಯಲ್ಲ. ಕೂಡಲೇ ಕರ್ತವ್ಯಕ್ಕೆ ಹಾಜರಾಗಿ’ ಎಂದು ಅವರು ಕೋರಿದ್ದಾರೆ.

ಸೋಮವಾರದಿಂದ ಅರ್ಜಿ ಸಲ್ಲಿಕೆ: 2022-23ರ ಶೈಕ್ಷಣಿಕ ವರ್ಷಕ್ಕೆ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆ ಸೋಮವಾರದಿಂದ (ಜ.17) ಆರಂಭವಾಗಲಿದೆ. ಇದಕ್ಕಾಗಿ ಅಭಿವೃದ್ಧಿಪಡಿಸಿರುವ ಆನ್‌-ಲೈನ್‌ ಪೋರ್ಟಲ್‌ನಲ್ಲಿ ಅತಿಥಿ ಉಪನ್ಯಾಸಕರು ಅರ್ಜಿ ಹಾಕಿಕೊಳ್ಳಬೇಕು. ಅರ್ಜಿ ಸಲ್ಲಿಸಲು ಒಂದು ವಾರ ಕಾಲಾವಕಾಶವಿದ್ದು, ಅಭ್ಯರ್ಥಿಗಳು ತಮ್ಮ ಇಷ್ಟದ ಐದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿKarnataka Guest Lecturer Salary Hike: ಸಂಕ್ರಾಂತಿ ಕೊಡುಗೆ, ಅತಿಥಿ ಉಪನ್ಯಾಸಕರ ವೇತನ ದುಪ್ಪಟ್ಟು ಹೆಚ್ಚಿಸಿದ ಸರಕಾರ

ಅರ್ಹರನ್ನು ಇಡೀ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ (10 ತಿಂಗಳು) ನೇಮಿಸಿಕೊಳ್ಳಲಾಗುವುದು. ಜತೆಗೆ, ಇನ್ನು ಮುಂದೆ ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿಸಲಾಗುವುದು. ಅತಿಥಿ ಉಪನ್ಯಾಸಕರು ವಿದ್ಯಾರ್ಥಿ ಸಮುದಾಯದ ಹಿತದೃಷ್ಟಿಯನ್ನೂ ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಅತಿಥಿ ಉಪನ್ಯಾಸಕರ ವೇತನ ದುಪ್ಪಟ್ಟು: ಅತಿಥಿ ಉಪನ್ಯಾಸಕರ ವೇತನ (salary) 11,000 ರೂ ನಿಂದ 28,000 ರೂ. ಗೆ ಏರಿಕೆ ಮಾಡಲಾಗಿದೆ. ಐದು ವರ್ಷ ಕ್ಕಿಂತ ಹೆಚ್ಚು ವರ್ಷ ಕೆಲಸ ಮಾಡಿರುವವರಿಗೆ , ಯುಜಿಸಿ ಕ್ವಾಲಿಫಿಕೇಷನ್ ಇರುವವರಿಗೆ  13,000 ರೂ ನಿಂದ 32,000 ರೂ. ಗೆ ಏರಿಕೆ ಮಾಡಲಾಗಿದೆ. ಇದು ಸಂಕ್ರಾಂತಿ ಹಬ್ಬದ ಕೊಡುಗೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್ ನಾರಾಯಣ್ (Ashwath Narayan) ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ.

ಅತಿಥಿ ಉಪನ್ಯಾಸಕರ ಬೇಡಿಕೆ ಇದ್ದು, ಇವರ ಬೇಡಿಕೆಗೆ ಅನುಗುಣವಾಗಿ, ಸಿಎಂ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಅಪರ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್ ನೇತೃತ್ವದಲ್ಲಿ ಸಮಿತಿ ಮಾಡಲಾಗಿತ್ತು. ಈ ಸಮಿತಿ ಸರ್ಕಾರದ ಮುಂದೆ ವರದಿ ನೀಡಿತ್ತು. ಇದನ್ನು ಮುಖ್ಯಮಂತ್ರಿಗಳು ಗಮನಿಸಿದ್ದು,  ವರದಿಯನ್ನು ಅನುಷ್ಠಾನಕ್ಕೆ ತರಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅಶ್ವಥ್ ನಾರಾಯಣ್  ಹೇಳಿದ್ದಾರೆ. 

Follow Us:
Download App:
  • android
  • ios