US High School Bans Mobiles; ಅಮೆರಿಕ ಶಾಲೆಗಳಲ್ಲಿ ಮೊಬೈಲ್ ನಿಷೇಧ ಬಳಿಕ ಉತ್ತಮ ಫಲಿತಾಂಶ!
ಅಮೆರಿಕ ಶಾಲೆಗಳಲ್ಲಿ ಮೊಬೈಲ್ ನಿಷೇಧಿಸಲಾಗಿದ್ದು, ಈ ಬೆಳವಣಿಗೆಯ ಬಳಿಕ ಉತ್ತಮ ಫಲಿತಾಂಶ ಲಭ್ಯವಾಗಿದೆ. ಕಲಿಕೆಯಲ್ಲಿ ಮಕ್ಕಳಿಗೆ ಆಸಕ್ತಿ ಹೆಚ್ಚಿದೆ. ವಿದ್ಯಾರ್ಥಿಗಳು ಹೆಚ್ಚು ಉಲ್ಲಸಿತರಾಗಿದ್ದಾರೆ.
ಮೆಸ್ಸಾಚುಸೆಟ್ಸ್: ಅಮೆರಿಕದ ಪ್ರೌಢಶಾಲೆಯೊಂದರಲ್ಲಿ ಸ್ಮಾರ್ಚ್‌ಫೋನ್‌ಗಳ ಬಳಕೆ ಮೇಲೆ ನಿಷೇಧವನ್ನು ಹೇರಿದ ಬಳಿಕ ವಿದ್ಯಾರ್ಥಿಗಳು ಹೆಚ್ಚು ಸಂತೋಷದಿಂದಿದ್ದು, ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ತನ್ನ ಇತ್ತೀಚಿನ ವರದಿಯಲ್ಲಿ ಬಹಿರಂಗ ಪಡಿಸಿದೆ. ಕೋವಿಡ್ ಬಳಿಕ ಮೆಸ್ಸಾಚುಸೆಟ್ಸ್‌ನಲ್ಲಿರುವ ಬುಕ್ಸಟನ್ ಸ್ಕೂಲ್ ವಿದ್ಯಾರ್ಥಿಗಳು ಮತ್ತೆ ಶಾಲೆಗೆ ಮರಳಿದಾಗ ಅತಿಯಾಗಿ ಫೋನನ್ನು ಬಳಸುತ್ತಿರುವುದನ್ನು ಶಿಕ್ಷಕರು ಗಮನಿಸಿದ್ದರು. ವಿದ್ಯಾರ್ಥಿಗಳು ಪರಸ್ಪರರ ಬಳಿ ಮಾತನಾಡುವುದನ್ನೇ ನಿಲ್ಲಿಸಿದ್ದರು. ಅವರಿಗೆ ಮುಖಾಮುಖಿ ಮಾತುಕತೆಯೇ ಮರೆತು ಹೋದಂತಿತ್ತು. ವಿದ್ಯಾರ್ಥಿಗಳು ಮುಖಾಮುಖಿ ಮಾತುಕತೆ ನಡೆಸಲು ಕಷ್ಟಪಡುತ್ತಿದ್ದರು. ಈ ಎಲ್ಲ ಕಾರಣಗಳಿಂದ ಶಾಲೆಯಲ್ಲಿ ಸ್ಮಾರ್ಚ್‌ಫೋನ್ ಬಳಕೆ ನಿರ್ಬಂಧಕ್ಕೆ ನಿರ್ಧರಿಸಲಾಯಿತು ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ.
114 ಎಕರೆ ವಿಶಾಲವಾದ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಫೋನುಗಳನ್ನು ಬಳಸುವಂತಿಲ್ಲ. ಸಮೀಪ ಮನೆಯಿದ್ದ ವಿದ್ಯಾರ್ಥಿಗಳು ಫೋನನ್ನು ಮನೆಯಲ್ಲೇ ಬಿಟ್ಟು ಬಂದರೆ ಉಳಿದವರು ಶಾಲೆಯ ಕೌಂಟರ್‌ಗಳಲ್ಲಿಡಬಹುದಾಗಿದೆ. ಕೇವಲ ಕರೆ ಮಾಡಬಹುದಾದ ಇಂಟರ್ನೆಟ್ ಇಲ್ಲದ ಪುಟ್ಟ ಮೊಬೈಲ್‌ಗಳಿಗೆ ಅನುಮತಿ ನೀಡಲಾಗಿದೆ.
ವಿದ್ಯಾರ್ಥಿಗಳು ಶಾಲಾ ದಿನದ ಕೊನೆಯಲ್ಲಿ ಸಾಮಾಜಿಕ ಮಾಧ್ಯಮವನ್ನು ಪ್ರವೇಶಿಸಲು ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳನ್ನು ಸಹ ಬಳಸಬಹುದು ಎಂದು ತಿಳಿಸಲಾಗಿದೆ. ನಿಷೇಧವು ಶಾಲೆಯಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಜೀವನವನ್ನು ಸುಧಾರಿಸಿದೆ.
ಅವರು ಶೈಕ್ಷಣಿಕ ಕೆಲಸದಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ, ಕಲೆಯ ಮೂಲಕ ಸೃಜನಾತ್ಮಕವಾಗಿ ತಮ್ಮನ್ನು ತಾವು ವ್ಯಕ್ತಪಡಿಸುತ್ತಾರೆ, ಒಬ್ಬರನ್ನೊಬ್ಬರು ತಿಳಿದುಕೊಳ್ಳುತ್ತಾರೆ ಮತ್ತು ತಮ್ಮನ್ನು ತಾವು ತಿಳಿದುಕೊಳ್ಳುತ್ತಾರೆ ಎಂದು ಅಧ್ಯಾಪಕರು ಒಬ್ಬರು ಪ್ರತಿಕ್ರಯಿಸಿದ್ದಾರೆ.
ವಿದ್ಯಾರ್ಥಿಗಳು ವಾಶ್‌ರೂಮ್‌ಗೆ ಹೋಗಲು ಅನುಮತಿ ಪಡೆಯುವುದು ಈಗ ತೀರಾ ಕಡಿಮೆಯಾಗಿದೆ ಎಂದು ಅಧ್ಯಾಪಕರೊಬ್ಬರು ಹೇಳಿದ್ದಾರೆ. ವಿದ್ಯಾರ್ಥಿಗಳು ಸಾಮಾನ್ಯವಾಗಿ ರೆಸ್ಟ್ ರೂಂ ಅನ್ನು "ಟೆಕ್ಸ್ಟ್ ಮಾಡಲು ಅಥವಾ TikTok ಪರೀಕ್ಷಿಸಲು" ಬಳಸುತ್ತಾರೆ ಎಂದು ಅವರು ಊಹಿಸಿದ್ದರು.
2ನೇ ಬಾರಿ ಪೀಜಿಗೆ ಸೇರುವ ಎಸ್ಸಿ- ಎಸ್ಟಿ ವಿದ್ಯಾರ್ಥಿಗೆ ಹಾಸ್ಟೆಲ್ ಇಲ್ಲ..!
ಸಹಜವಾಗಿ, ಹದಿಹರೆಯದವರು ಮತ್ತು ಕೆಲವು ವಯಸ್ಕರು ಸಹ ಆರಂಭದಲ್ಲಿ ಗ್ಯಾಜೆಟ್ , ಸ್ಮಾರ್ಟ್‌ಫೋನ್ ನಿಷೇಧಕ್ಕೆ ವಿರೋಧಿಸಿದ್ದರು. ಈಗ ಅವರೆಲ್ಲ ಹೊಂದಿಕೊಂಡಿದ್ದಾರೆ. ಆದರೂ ಆಕ್ರೋಶಗೊಂಡ ಕುಟುಂಬವೊಂದು ತಮ್ಮ ಮಗುವನ್ನು ಶಾಲೆಯಿಂದ ಹಿಂತೆಗೆದುಕೊಂಡಿದೆ. ಜಗತ್ತು ಯಾವಾಗಲೂ ತಂತ್ರಜ್ಞಾನವನ್ನು ಹೊಂದಲಿದೆ ಮತ್ತು ಅದನ್ನು ನಮ್ಮ ವಿದ್ಯಾರ್ಥಿಗಳಿಂದ ಸಂಪೂರ್ಣವಾಗಿ ತೆಗೆದುಹಾಕಲು ನಾವು ಪ್ರಯತ್ನಿಸುತ್ತಿಲ್ಲ ಎಂದು ಪ್ರಾಧ್ಯಾಪಕರೊಬ್ಬರು ಸ್ಪಷ್ಟನೆ ನೀಡಿದ್ದಾರೆ.
ಶಾಲಾ ಮಕ್ಕಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಬಸ್ ಸೌಲಭ್ಯ, ನನ್ನ ಕ್ಷೇತ್ರದಿಂದಲೇ ಆರಂಭಿಸುವ ಉದ್ದೇಶ: ಸಿಎಂ ಬೊಮ್ಮಾಯಿ
ಸಕಾರಾತ್ಮಕ ಪರಿಣಾಮ:
ನಿಷೇಧವು ಶಾಲೆಯಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ವಿದ್ಯಾರ್ಥಿಗಳು ಕೂಡ ಇದಕ್ಕೆ ಹೊಂದಿಕೊಂಡಿದ್ದು, ಕಲಿಕೆ, ಕ್ರೀಡೆಯಲ್ಲಿ, ಪರಸ್ಪರ ಪರಿಚಯ ಮಾಡಿಕೊಂಡು ಮಾತನಾಡುವುದರಲ್ಲಿ ಆಸಕ್ತಿ ತೋರುತ್ತಿದ್ದಾರೆ. ಇದರಿಂದಾಗಿ ಶಿಕ್ಷಣವಷ್ಟೇ ಅಲ್ಲ ವಿದ್ಯಾರ್ಥಿಗಳ ಸಾಮಾಜಿಕ ಜೀವನವೂ ಬಲಗೊಳ್ಳುತ್ತಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಕೆಲಸವನ್ನು ಮಾಡಲು ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ, ಕಲೆಯ ಮೂಲಕ ಸೃಜನಾತ್ಮಕವಾಗಿ ತಮ್ಮನ್ನು ತಾವು ವ್ಯಕ್ತಪಡಿಸುತ್ತಾರೆ, ಒಬ್ಬರನ್ನೊಬ್ಬರು ತಿಳಿದುಕೊಳ್ಳುತ್ತಾರೆ ಮತ್ತು ತಮ್ಮನ್ನು ತಾವು ತಿಳಿದುಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.