UPSC Result 2021; ಕೊನೆಗೂ ಈಡೇರಿದ Koppala ದಂತ ವೈದ್ಯೆಯ ಕನಸು

  • ಯುಪಿಎಸ್ಸಿ ಪರೀಕ್ಷೆಯಲ್ಲಿ‌ 191ನೇ Rank ಪಡೆದ ಹೊಸಪೇಟೆ ಮೂಲದ ಡಾ.‌ ಅಪೂರ್ವ ಬಾಸೂರ 
  • ಎರಡನೇ ಯತ್ನದಲ್ಲೇ ಐಎಎಸ್ ಪಾಸಾದ ಅಪೂರ್ವ ಬಾಸೂರ 
  • ಕೆಎಎಸ್ ಪರೀಕ್ಷೆ ಬರೆದಿದ್ದು ಇನ್ನೂ ಫಲಿತಾಂಶ ಬಂದಿಲ್ಲ
upsc-result-2021 dentist apurva basara-from-koppal-upsc-topper gow

ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಮೇ.30) : ಆ ಯುವತಿ ಬಾಲ್ಯದಿಂದಲೂ IAS ಆಗುವ ಕನಸ್ಸು ಕಂಡಿದ್ದಳು.‌ ಅದರಂತೆ ಆಕೆ ಬಾಲ್ಯದಿಂದಲೇ ಸಿವಿಲ್ ಸರ್ವಿಸ್ ಗೆ ತಯಾರಾಗುತ್ತಲೇ ಬಂದಿದ್ದಳು. ಆಕೆಯ ಕನಸ್ಸಿನಂತೆ ಇದೀಗ ಆಕೆ ಯುಪಿಎಸ್ಸಿ (UPSC) ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ತನ್ನ ಕನಸನ್ನ ನನಸು ಮಾಡಿಕೊಂಡಿದ್ದಾಳೆ. ಅಷ್ಟಕ್ಕೂ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಯುವತಿ ಯಾರು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.

ಡಾ ಶ್ರೀಕಾಂತ್ ಬಾಸೂರ್, ಅಂದರೆ ಸಾಕು ಕೊಪ್ಪಳ ಜಿಲ್ಲೆಯ ಜನರಿಗೆ ಇವರ ಪರಿಚಯ ಸಾಕಷ್ಟು ಇರುವಂತಹದ್ದು. ಜಿಲ್ಲೆಯ ಗಂಗಾವತಿಯಲ್ಲಿ ಇ ಎನ್ ಟಿ ಸ್ಪೇಶಲಿಸ್ಟ್ ಆಗಿದ್ದ ಇವರು ಈ ಹಿಂದೆ ಕೊಪ್ಪಳ ಜಿಲ್ಲೆಯ ಡಿ ಎಚ್ ಓ ಆಗಿ ಕಾರ್ಯನಿರ್ವಹಿಸಿದ್ದಾರೆ. ಇಂತವರ ಮಗಳಾದ ಡಾ ಅಪೂರ್ವ ಬಾಸೂರ್ ಇದೀಗ ಯುಪಿಎಸ್ಸಿ ಪರೀಕ್ಷೆಯಲ್ಲಿ 191 ನೇ ರ‍್ಯಾಂಕ್‌ ಪಡೆಯುವ ಮೂಲಕ ಇದೀಗ ಸೈ ಎನಿಸಿಕೊಂಡಿದ್ದಾರೆ.

ಡಾ ಅಪೂರ್ವ ಬಾಸೂರ್ ಅವರ ಶಿಕ್ಷಣದ ಹಿನ್ನಲೆ ನೋಡೋದಾದ್ರೆ 2010-11 ನೆಯ ಸಾಲಿನಲ್ಲಿ ಗಂಗಾವತಿಯಲ್ಲಿ ಎಸ್ಎಸ್ ಎಲ್ ಸಿ ಮುಗಿಸಿದ ಅಪೂರ್ವ, ಮಂಗಳೂರಿನ ಎಕ್ಸಫರ್ಟ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬಳಿಕ ಬೆಂಗಳೂರಿನ‌ ಆರ್ ವಿ ಡೆಂಟಲ್ ಕಾಲೇಜಿ ಬಿಡಿಎಸ್ ಪದವಿ ಪೂರ್ಣಗೊಳಿಸಿದರು.‌ಬಳಿಕ‌ ದಂತವೈದ್ಯೆ ಆಗದೇ ನೇರವಾಗಿ ತಮ್ಮ ಬಾಲ್ಯದ ಕನಸಿನಂತೆ ಯುಪಿಎಸ್ಸಿ ಪರೀಕ್ಷೆ ಬರೆಯಲು ಸಿದ್ದವಾದರು. ಅದರಂತೆ ದೆಹಲಿಯಲ್ಲಿ ಎರಡೂವರೆ ವರ್ಷ ಐಎಎಸ್ ಕೋಚಿಂಗ್ ಪಡೆದರು.

ದೃಷ್ಟಿ ವಿಶೇಷ ಚೇತನೆ UPSC ಟಾಪರ್, Mysuru ಯುವತಿ ಸಾಧನೆ

ಎರಡನೇ ಪ್ರಯತ್ನದಲ್ಲಿ ಯುಪಿಎಸ್ಸಿ  ತೇರ್ಗಡೆ: ಇನ್ನು ಡಾ ಅಪೂರ್ವ ಬಾಸೂರ್ ಮೊದಲನೇ ಪ್ರಯತ್ನದಲ್ಲಿ ಯುಪಿಎಸ್ಸಿ ತೇರ್ಗಡೆಯಾಗಿಲ್ಲ.‌ ಬದಲಾಗಿ ಎರಡನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆ ತೇರ್ಗಡೆ ಆಗಿದ್ದಾರೆ. ಮೊದಲನೇ ಪ್ರಯತ್ನದಲ್ಲಿ ಡಾ ಅಪೂರ್ವ ಪ್ರಿಲಿಮ್ಸ್ ಮಾತ್ರ ತೇರ್ಗಡೆಯಾದರು. ಆದರೆ ಮೇನ್ಸ್ ಕ್ಲಿಯರ್ ಆಗಲಿಲ್ಲ.‌ಆದರೆ ಎರಡನೇ ಪ್ರಯತ್ನದಲ್ಲಿ ಪ್ರಿಲಿಮ್ಸ್, ಮೇನ್ಸ್ ಹಾಗೂ ಇಂಟರವ್ಯೂವ್ ಕ್ಲೀಯರ್ ಮಾಡಿ ಯುಪಿಎಸ್ಸಿ ಪರೀಕ್ಷೆಯಲ್ಲಿ 191 ನೇ ರ‍್ಯಾಂಕ್‌   ಪಡೆಯುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಜನರ ಸೇವೆಗೊಂದು ಉತ್ತಮ ಅವಕಾಶ: ಬಾಲ್ಯದಿಂದಲೂ ಸಿವಿಲ್ ಸರ್ವಿಸ್ ಆಫೀಅರ್ ಆಗಬೇಕೆನ್ನುವ ಕನಸು ಕಂಡಿದ್ದ ಡಾ ಅಪೂರ್ವ ಬಾಸೂರ್ ತಮ್ಮ ಕನಸಿನಂತೆ ಇದೀಗ 191 ನೇ ರ‍್ಯಾಂಕ್‌  ಪಡೆಯುವ ಮೂಲಕ ಉತ್ತಮ ಫಲಿತಾಂಶ ಪಡೆದಿದ್ದಾರೆ. ಇನ್ನು ಅಧಿಕಾರಿಯಾದ ಬಳಿಕ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಹಾಗೂ ಜನರ ಸೇವೆ ಮಾಡಬೇಕೆನ್ನುವ ಮಹದಾಸೆಯನ್ನು ಡಾ ಅಪೂರ್ವ ಬಾಸೂರ್ ಹೊಂದಿದ್ದಾರೆ.

UPSCಯಲ್ಲಿ 92ನೇ ರ‍್ಯಾಂಕ್‌ ಪಡೆದ‌ ವೈದ್ಯಾಧಿಕಾರಿ Chitradurgaದ ಕುವರ!

ಒಟ್ಟಿನಲ್ಲಿ ಬಾಲ್ಯದಿಂದಲೂ ಸಹ ಸಿವಿಲ್ ಸರ್ವಿಸ್ ಅಧಿಕಾರಿಯಾಗಬೇಕೆಂದು ಆಸೆ ಇಟ್ಟುಕೊಂಡಿದ್ದ ಡಾ ಅಪೂರ್ವ ಬಾಸೂರ್ ಕೊನೆಗೂ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಸಮರ್ಪಣಾ ಭಾವದಿಂದ ಓದಿದರೆ ಏನಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟ ಡಾ ಅಪೂರ್ವ ಬಾಸೂರ್ ಗೆ ಅಭಿನಂದನೆಗಳು.

Latest Videos
Follow Us:
Download App:
  • android
  • ios